ಕವಿಯ ಕರ್ಮವೇ-ಪ್ರಾಜ್ಞರ ಅಂಬೊಣ
ಓದುಗರ ಕರ್ಮ ಎಂಬುವುದು ಕೆಲವರ ಅಭಿಪ್ರಾಯ
ಕಾವ್ಯಕ್ಕೂ ಕವಿತೆಗೂ ವ್ಯತ್ಯಾಸವಿದೆ, ಕಾವ್ಯತ್ವದಲ್ಲಿ
ಗೀಚಿದ್ದೆಲ್ಲ ಕವನವಾಗಬಹುದು, ಕಾವ್ಯವಾಗದು
ಕಾವ್ಯ ಬರೆದರೆ ಓದುವವರೂ ಸಿಗುವುದಿಲ್ಲ, ಪ್ರಶಸ್ತಿಯೂ ಸಿಗದು
ಗದ್ಯ ಬರೆಯಲು ಪುರಸೊತ್ತಿಲ್ಲದವರು ಬರೆದ ತುಂಡು ತುಂಡು ಸಾಲುಗಳೂ ಈಗ ಇದೇ ಹೆಸರಿನಲ್ಲಿ ಚಾಲ್ತಿಯಲ್ಲಿದೆ
ಕಾವ್ಯ ಕನ್ನಿಕೆ ಎಲ್ಲರಿಗೂ ಒಲಿಯುವುದಿಲ್ಲ, ಯಾವ 'ಪೀಠ'ದ ಮೇಲೆ ಕುಳಿತರೂ
ಸದ್ಯಕ್ಕೆ ಬರೆದದ್ದೆಲ್ಲ ಪದ್ಯವೇ, ಅದು ಹೃದ್ಯವಾಗಿರಬೇಕೆಂದಿಲ್ಲ, ಅವದ್ಯವಾದರೂ ಓ.ಕೆ.
ರವಿಯೂ ಕಾಣದ ಕನ್ನಿಕೆ ಈಕೆ, ಕವಿ ಕಣ್ಣಿಗೆ ಕಾಣಿಸುವಳು
ಕಾವ್ಯವೇ ನನ್ನ ಉಸಿರು ಎಂದು ಹೇಳಿಕೊಳ್ಳುವವರೆಲ್ಲ ಬೇರೆಯವರ ಪ್ರಾಣದ ಜೊತೆ ಆಟವಾಡುತ್ತಿರುತ್ತಾರೆ
ಕಾವ್ಯ ಆನಂದವನ್ನು ನೀಡುತ್ತೆ, ಕವನ ಅದನ್ನು ಕೆಡಿಸುತ್ತೆ
ಇದು ಶ್ರಾವ್ಯವೂ ಹೌದು, ಅನುಭಾವ್ಯವೂ ಹೌದು
-ವಿಶ್ವನಾಥ ಸುಂಕಸಾಳ
vishwasunkasal@yahoo.com