ಎಲ್ಲ ಕೋಣಗಳಿಗಿಂತ ಚೂರು ಚುರುಕು ಕೋಣ
ತನ್ನ ಮೂರ್ಖತನವನ್ನು ಬಾಯಿ ಬಿಟ್ಟು ಪ್ರದರ್ಶಿಸಿಕೊಳ್ಳದವ
ದುಡುಕದೇ ಹುಡುಕುವವ
ಹುಚ್ಚರು ಇದ್ದಲ್ಲಿ ಹುಚ್ಚನಂತೆಯೇ ಇದ್ದು ಮೆಚ್ಚಿಸಿಕೊಳ್ಳುವವ
ಜಾಣನಾಗುವುದಕ್ಕೆ ಯಾವುದೇ ಮಾರ್ಗಗಳಿಲ್ಲ, ಹೊಸ ಮಾರ್ಗ ಸೃಷ್ಟಿಸಿಕೊಳ್ಳುವವನೇ ಜಾಣ
ದಡ್ಡನನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದವ
ಬೇರೆಯವರು ಕೆಟ್ಟಿದ್ದನ್ನು ನೋಡಿಯೇ ಬುದ್ಧಿ ಕಲಿತವ
ಝಣ ಝಣ ಕಾಂಚಾಣ ಗಳಿಸುವ ವಿದ್ಯೆ ತಿಳಿದ ಚಾಣಾಕ್ಷ
ವಸಂತ ಬಂದರೂ ರಾಗ ಬದಲಿಸದ ಕಾಜಾಣ ಈತ
ಪರೀಕ್ಷೆಯ ಮುನ್ನಾ ದಿನ ಓದಿ ಪ್ರಥಮ ಸ್ಥಾನ ಗಳಿಸುವವ
ಈತನಿಗೆ ಮಾತಿನ ಪೆಟ್ಟೇ ಸಾಕು..
ಹೆಂಡತಿ ಹೇಳಿದ ಸಾಮಾನುಗಳನ್ನೆಲ್ಲ ಮರೆಯದೇ ತರುವವ
ಇವನೊಂಥರ ಜಾಣಕ್ಯ
ಆಡಿ ಕೆಡದವ ಜಾಣ, ಆಡದೇ ಕೆಡದವ ಮನಮೋಹನ, ಆಡದಿದ್ದರೂ ಕೆಡದವ ಸಚಿನ್
ಹೆಂಡತಿಯನ್ನು ಯಾವತ್ತೂ ಸಿಟ್ಟಾಗದಂತೆ ನೋಡಿಕೊಳ್ಳುವವ
ಕಷ್ಟಪಡದೇ ಸುಖಪಡುವ ಮಾರ್ಗ ತಿಳಿದವ, ಆದರೆ ಅದನ್ನು ಬೇರೆಯವರಿಗೆ ತಿಳಿಸದವ
-ವಿಶ್ವನಾಥ ಸುಂಕಸಾಳ
vishwasunkasal@yahoo.com