'ನಾನು' ಯಾವತ್ತೂ ಉತ್ತಮ ಪುರುಷ
ನನ್ನೊಳಗಿನ ಎಲ್ಲ ಬೇನೆಗೆ ಮುಖ್ಯ ಕಾರಣ
ಅಹಂ ಶಬ್ದದಷ್ಟೇ ಈ ಶಬ್ದವೂ ಶಬ್ದ ಮಾಡುತ್ತದೆ
ನಾನು ಜಗತ್ತಿಗೆ stick ಆಗಬಾರದೆಂದರೆ, ನಾನು non-stickಆಗಬೇಕು
ನಾಕೇ ನಾಕು ತಂತಿಗಳಲ್ಲಿ ಮೊದಲನೆಯದು
ಇದು pronounಕೂಡ ಹೌದು, noun ಕೂಡ ಹೌದು
ನೀನು ಎನ್ನಲು ಕಾರಣವಾದ ಪ್ರತ್ಯಯ
ನನ್ನನ್ನು ಯಾರೆಂದು ತಿಳಿದಿದ್ದೀ..ಎಂದು ಬೇರೆಯವರನ್ನು ಕೇಳುವ ಮೊದಲು ನಾವೇ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಉತ್ತಮ
ನಾನು ಮೊದಲು ಬಂದರೆ ಅವನ ಕೊನೆ ಬಂದಿದೆಯೆಂದರ್ಥ
ಹಮ್ಮು ಅಥವಾ ಅಹಮ್ಮು
ನಾನು ಆದ ಮೇಲೆಯೇ ನೀನು, ಡಿಕ್ಷನರಿಯಲ್ಲೂ
ಒಂದೆರಡಲ್ಲ..ನಾನಾ ರೂಪ ಇದರದ್ದು
-ವಿಶ್ವನಾಥ ಸುಂಕಸಾಳ
vishwasunkasal@yahoo.com