ಅಕ್ರಮ ಗಣಿಗಾರಿಕೆಯ ಕತೆ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿರುವ ಅಕ್ರಮ ಗಣಿಗಾರಿಕೆ ನಿಜವಾಗಲೂ ಒಂದು ದೊಡ್ಡ ಪೀಡೆ. ಈ ಅವ್ಯವಹಾರದಿಂದ ಪರಿಸರಕ್ಕೆ ಆಗಿರುವ ಹಾನಿಗೆ ಮೌಲ್ಯವನ್ನು ಕಟ್ಟುವುದು ಸಾಧ್ಯವೇ ಇಲ್ಲ. ಕೆಲವು ಪ್ರದೇಶಗಳಂತೂ ಮನುಷ್ಯರು ಬದುಕಿರುವುದೇ ಅಸಾಧ್ಯವೆನ್ನುವ ಪರಿಸ್ಥಿತಿಯನ್ನು ಮುಟ್ಟಿದೆ.
ಈ ಅಕ್ರಮ ಗಣಿಗಾರಿಕೆಯ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸಮಗ್ರ ಸ್ವರೂಪದ ವರದಿಯನ್ನು ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿ ಎರಡು ವರ್ಷಗಳೇ ಉರುಳಿದರೂ ಹೇಳಿಕೊಳ್ಳುವಂತಹ ಕ್ರಮವನ್ನು ಸರ್ಕಾರ ಜರುಗಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಕ್ರಮ ಗಣಿಗಾರಿಕೆಯಿಂದ ಸುಮಾರು 16,000 ಕೋಟಿ ರುಪಾಯಿಗಳಷ್ಟು ನಷ್ಟವಾಗಿದೆ ಎಂದಿದ್ದಾರೆ. ಲೋಕಾಯುಕ್ತರ ವರದಿಯಲ್ಲಿ ಹೆಸರು ಕಾಣಿಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಪಟ್ಟಿಯಲ್ಲಿ ಹಲವಾರು ಐ.ಎ.ಎಸ್. ಅಧಿಕಾರಿಗಳೂ ಇದ್ದಾರೆ. ಇವರೆಲ್ಲರ ವಿಚಾರಣೆ ಮುಗಿದು ಅವರ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಲು, ಈಗಿನ ವ್ಯವಸ್ಥೆಯಲ್ಲಿ ವಿಪರೀತ ಕಾಲ ಬೇಕು. ಇದನ್ನು ಸರ್ಕಾರ ಮಾಮೂಲಿ ಕೆಲಸವೆನ್ನುವಂತೆ ಪರಿಗಣಿಸಬಾರದು. ಅಕ್ರಮ ಗಣಿಗಾರಿಕೆಯ ತಡೆ ಹಾಗೂ ಆ ಪಾತಕದಲ್ಲಿ ತೊಡಗಿದ್ದವರನ್ನು ಶಿಕ್ಷಿಸುವುದನ್ನು ಒಂದು ಮಹಾ ಸಮರವೆಂದೇ ಸರ್ಕಾರ ಭಾವಿಸಬೇಕು.
ವಿಶೇಷ ನ್ಯಾಯಾಲಯಗಳ ರಚನೆ, ಅಲ್ಲಿ ಕೆಲಸ ಮಾಡಲು ಸಮರ್ಥರಾದ ಪ್ರಾಸಿಕ್ಯೂಟರ್ಗಳನ್ನು ನೇಮಿಸಿ, ಆದಷ್ಟು ಬೇಗ ಕೆಲವರಿಗಾದರೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇದನ್ನು ತುರ್ತು ಕೆಲಸ ಎಂದೇ ಭಾವಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

