ಸಂಪಾದಕೀಯ

ತೃಣಮೂಲದ ಭಾರಿ ಜಯ

Published On :

ಮಮತಾ ಬ್ಯಾನರ್ಜಿಯವರ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿನ ರೀತಿ - ನೀತಿ ಹಾಗೂ ರಾಜಕೀಯ ವರ್ತನೆ, ದೇಶದ ಅನೇಕ ವಲಯಗಳಲ್ಲಿ ತೀವ್ರವಾದ ಟೀಕೆಗೆ ಒಳಗಾಗಿದ್ದರೂ, ಪಶ್ಚಿಮ ಬಂಗಾಳದ ಪಂಚಾಯಿತಿ ರಾಜ್ಯ ಸಂಸ್ಥೆಗಳ ಚುನಾವಣೆಯಲ್ಲಿ ಆ ಪಕ್ಷ ಪ್ರಚಂಡ ಎನ್ನಬಹುದಾದ ರೀತಿಯಲ್ಲೇ ಗೆದ್ದಿದೆ. ಐದು ವರ್ಷಗಳ ಹಿಂದೆ, ರಾಜ್ಯದ ಹದಿನೇಳು ಜಿಲ್ಲೆಗಳಲ್ಲಿ ಹದಿಮೂರರಲ್ಲಿ ಕಮ್ಯುನಿಸ್ಟರು - ಕಾಂಗ್ರೆಸ್ ವಿರುದ್ಧ ಸೋತಿದ್ದ ತೃಣಮೂಲ ಕಾಂಗ್ರೆಸ್ ಈಗ ಕಮ್ಯುನಿಸ್ಟರಿಗೆ ಉಳಿಸಿದ್ದು ಒಂದೇ ಒಂದು ಜಿಲ್ಲೆ; ಜಲಪೈಗುರಿ. ಕಾಂಗ್ರೆಸ್ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮಾತ್ರ ಗೆದ್ದಿದೆ. ಎರಡು ಜಿಲ್ಲೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದು.
ಮಮತಾ ಬ್ಯಾನರ್ಜಿ ಅವರಿಗೆ ಈಗ ಪಂಚಾಯಿತಿ ಚುನಾವಣೆ ನಡೆಯುವುದು ಬೇಕಾಗಿರಲಿಲ್ಲ. ಪಶ್ಚಿಮ ಬಂಗಾಳ ತೀವ್ರ ಸ್ವರೂಪದ ಹಣದ ಬಿಕ್ಕಟ್ಟನ್ನೇ ಎದುರಿಸುತ್ತಿದೆ. ಈಚಿನ ದಿನಗಳಲ್ಲಿ ರಾಜ್ಯದಲ್ಲಿ ಹಿಂಸಾಚಾರ, ಗೂಂಡಾಗಿರಿಗಳೂ ಹೆಚ್ಚುತ್ತಿರುವ ವರದಿಗಳಿವೆ. ಆದರೂ ಅಲ್ಲಿನ ಮುಖ್ಯ ಚುನಾವಣೆ ಅಧಿಕಾರಿ ನಿಗದಿಪಡಿಸಿದ ವೇಳಾಪಟ್ಟಿಯಂತೆಯೇ ಚುನಾವಣೆ ನಡೆಸಲು ಹಟ ಹಿಡಿದು, ಚುನಾವಣೆ ಸಮಯದಲ್ಲಿ ಕಾಯಿದೆ ಪಾಲನೆಯ ವ್ಯವಸ್ಥೆ ಹಾಗೂ ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರ ಪೊಲೀಸ್ ಪಡೆಗಳನ್ನು ಕರೆಸಿಕೊಡಿದ್ದರು. ಹಿಂಸಾಚಾರ ನಡೆದಿದೆ. ಚುನಾವಣೆ ಸಂಬಂಧದ ಘರ್ಷಣೆಯಲ್ಲಿ 24 ಮಂದಿ ಸತ್ತಿದ್ದಾರೆ. ವಾಮರಂಗದ ನಾಯಕರು ತೃಣಮೂಲ ಕಾಂಗ್ರೆಸ್ ವಿರುದ್ಧ ಹಿಂಸಾಚಾರದ ಆರೋಪವನ್ನು ಧಾರಾಳವಾಗಿ ಮಾಡಿದ್ದರು. ಅದು ಅಲ್ಲಿನ ರಾಜಕೀಯದಲ್ಲಿ ಈಗ ಸಹಜ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.