ಕುಲಗೆಟ್ಟ ರಾಜಕೀಯದ ವಸಂತೋತ್ಸವ
ಒಂದಿಷ್ಟು ಜನರನ್ನು 'ಆಳಿರಿ' ಎಂದೂ, ಮತ್ತೊಂದಿಷ್ಟು ಜನರನ್ನು 'ಅವರನ್ನು ತಡೆಯಿರಿ' ಎಂದೂ ಆರಿಸಿ ಕಳಿಸುವ ಪ್ರಕ್ರಿಯೆ
ಪ್ರಜಾಪ್ರಭುತ್ವದ ಹುಣ್ಣು, ಸತ್ಯ ಧರ್ಮವೆಲ್ಲ ಮಣ್ಣು
ಬವಣೆಯ ಮೂಲ - ಚುನಾವಣೆ
ಪಕ್ಷಗಳ ಅದೃಷ್ಟದಾಟ, ಪ್ರಜೆಗೆ ಮಾತ್ರ ಸಂಕಟ
ದೇಶದ ಆರ್ಥಿಕ ಆರೋಗ್ಯದ ಅರ್ಬುದ
ಇಷ್ಟು ದಿನ ಆರಿಸಿಹೋದವರ ಹಣೆಬರಹ ಪುನಃ ನಿರ್ಧರಿಸಲು ಸೂಕ್ತ ಸಮಯ
ಗತಿ ಇಲ್ಲದೇ ಮತ ಹಾಕಬೇಕಾದ ಅವಸ್ಥೆ
ಒಳ್ಳೆಯ ಆಯ್ಕೆ ಮಾಡಲು ಆಯ್ಕೆಯೇ ಇಲ್ಲದ ಸಂಕಟ
ಕೋಟಿ ವೀರರ ನಡುವಿನ ಪಾಟೀ ಸವಾಲು
ಆರಿಸಿ ಹೋದವನ 'ಸಂಪತ್ಕರೀ'
ಜನರ ದುಡ್ಡಿನಲ್ಲಿ ಜನಾರ್ದನನ ಜಾತ್ರೆ ನಡೆಸುವ ಪೂರ್ವಭಾವಿ ಕ್ರಮ
ಒಂದು ಹಂದಿ ಮತ್ತೊಂದು ಹಂದಿಯ ಮೇಲೆ ಕೆಸರೆರಚುವ ಸಂದರ್ಭ
ಪ್ರಚಾರ ಸಭೆಗಳ ಮೂಲಕ ಅಮಾಯಕ ಮತದಾರನ ಅಮೂಲ್ಯ ಸಮಯ ಪೋಲು ಮಾಡುವ ಹಬ್ಬ
ಕೈ ತೋರಿಸಿ ಶಾಯಿ ಹಾಕಿಸಿಕೊಳ್ಳುವ ಭಾಗ್ಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com