ಟೀಚರ್ ಮರಿಕೋಲ್ಯನನ್ನು ಎಬ್ಬಿಸಿ ಪ್ರಶ್ನಿಸುತ್ತಾನೆ
ಟೀಚರ್: ನಿನಗೆ ನಾನು ಹತ್ತು ಲಡ್ಡು ಕೊಟ್ಟೆ ಅಂತ ಅನ್ಕೊ.
ಮರಿಕೋಲ್ಯ: ನೀವ್ಯಾವಾಗ ನನಗೆ ಕೊಟ್ರೀ ಸಾರ್?
ಟೀಚರ್: ಲೇ...ಕೊಟ್ಟಿದೀನಿ ಅನ್ಕೊಂಡ್ರೆ ನಿಮ್ಮಪ್ಪನ ಗಂಟೇನು ಹೋಗುತ್ತೆ?
ಮರಿಕೋಲ್ಯ: ಆಯ್ತು ಸರ್...ಅನ್ಕೊತೀನಿ.
ಟೀಚರ್: ಹಾಗೆ ಬಾ ದಾರಿಗೆ. ಆ ಹತ್ತು ಲಡ್ಡುಗಳಲ್ಲಿ ಐದನ್ನು ನಿನ್ನ ಗೆಳೆಯ ಇಸ್ಕೊಂಡಾ ಅಂದ್ರೆ ಎಷ್ಟು ಉಳಿಯುತ್ತೆ?
ಮರಿಕೋಲ್ಯ: 45!
ಟೀಚರ್: ಅದ್ಹೋಗೋ?
ಮರಿಕೋಲ್ಯ: ರೀ...45 ಅನ್ಕೊಂಡ್ರೆ ನಿಮ್ಮಪ್ಪನ ಗಂಟೇನು ಹೋಗುತ್ತೆ?