ಮೂರ್ಖಾವಸ್ಥೆಗಿಂತ ಒಂದು ಮೆಟ್ಟಿಲು ಕೆಳಗಿನದ್ದು
ದೊಡ್ಡವರೆನಿಸಿಕೊಳ್ಳಲು ಮೀರಬೇಕಾದದ್ದು
ತಲೆಯೊಳಗೆ ತುಂಬಿರುವ ಹೆಡ್ಡತನ
ಬುದ್ಧಿವಂತಿಕೆ ಚೂರು ಗಿಡ್ಡ ಬಿದ್ದಾಗ ಆವರಿಸಿಕೊಳ್ಳುವಂಥದ್ದು
ಗುಡ್ಡ ಕಡಿದು ಇಲಿ ಹಿಡಿಯುವ ಪರಾಕ್ರಮ
ಬಡತನಕ್ಕೆ ಕಾರಣವಾದದ್ದು
ಹಗ್ಗವಿದೆಯೆಂಬ ಕಾರಣಕ್ಕೆ ದನವನ್ನುಕೊಳ್ಳುವುದು
ಪ್ರೇಯಸಿ ಹೆಚ್ಚು ಎಂಜಾಯ್ ಮಾಡುವ ಪ್ರಿಯಕರನಲ್ಲಿ ಇರುವ ಗುಣ
ಇದು ಗಂಡಸರದ್ದೇ ಆಸ್ತೀ, ಆದರೂ ಹೆಂಗಸರಲ್ಲೇ ಜಾಸ್ತಿ
ಇದನ್ನು ಸಂರ್ಪೂಣವಾಗಿ ತೊಲಗಿಸಲು ಸಾಧ್ಯವಿಲ್ಲ ಎಂಬುದು ಎಲ್ಲರ ಅನುಭವ
ಪಾಕಿಸ್ತಾನ ತಪ್ಪು ಮಾಡಿದಾಗೆಲ್ಲ ಭಾರತ ಪ್ರತಿಕ್ರಿಯಿಸುವ ರೀತಿಗೆ ಹೀಗೆಯೇ ಹೇಳುವುದು
-ವಿಶ್ವನಾಥ ಸುಂಕಸಾಳ