ತೊಂದರೆ ಎಂದರೆ ಏನೆಂದು ತಿಳಿಸಿಕೊಡುವ ತೊಂದರೆ ಇಲ್ಲ. ಎಲ್ಲರಿಗೂ ಅನುಭವ ವೇದ್ಯವೇ
ತೊಂದರೆ ಕೊಟ್ಟು ಅಥವಾ ತೊಂದರೆ ಪಟ್ಟ ಎಲ್ಲರಿಗೂ ಇದು ಪರಿಚಿತ
ಯಾರಾದರೂ ಏನಾದರೂ ತೊಂದರೆ ತೆಗೆದುಕೊಳ್ಳುವಂತಾದರೆ ಏನೋ ಲಾಭವಿದೆ ಎಂದರ್ಥ
ತೊಂದರೆ ಕೊಡುವುದಕ್ಕೆ ಈ ನಿಯಮವಿಲ್ಲ
ಧಡೂತಿ ವ್ಯಕ್ತಿಯ ಜೊತೆ ಸಣ್ಣ ಸೀಟನ್ನು ಹಂಚಿಕೊಳ್ಳುವ ಸಂದರ್ಭ
ಹೊಂದಾಣಿಕೆಯಿಲ್ಲದಿದ್ದರೆ ಉಂಟಾಗುವುದು ಇದೇ
ಅಕಾಲದಲ್ಲಿ ಮಳೆ ಮತ್ತು ಹೊಳೆ ಬಂದರೆ ಆಗೋದು ಇದೇ
ಪಕ್ಕದ ಮನೆಯಲ್ಲಿ ಸಂಗೀತಾಭ್ಯಾಸಿಗಳಿದ್ದರೆ..
ಮೈಕಾಸುರನ ಹಾವಳಿಯ ಫಲ
ಕಷ್ಟದಲ್ಲಿ ಬೆಂದರೆ ತಿಳಿಯುವುದು ಏನೆಂದು ತೊಂದರೆ
ನೆಂಟರು ಬಂದರೆ ನಮಗಾಗೋದು...
ಕಿರಿಕಿರಿ ಮತ್ತು ಕರೆಕರೆ
ತೊಂದರೆಯನ್ನು ಮದುವೆ ಎಂಬ ಪ್ಯಾಕೇಜ್‌ನಲ್ಲಿ ಕೊಟ್ಟರೆ ಎಲ್ಲರಿಗೂ ಇಷ್ಟವೇ
-ವಿಶ್ವನಾಥ ಸುಂಕಸಾಳ
vishwasunkasal@yahoo.com