ಡೈವೋರ್ಸ್ಗೆ ಮುಖ್ಯ ಕಾರಣ
ಪ್ರೇಮವೆಂಬ ಅವಿವೇಕ ತಂದ್ದೊಡ್ಡುವ ಅಪಾಯ
ಶೀಲ ಕಳೆದುಕೊಳ್ಳಲು ಇರುವ ಅಧಿಕೃತ ಅವಕಾಶ
ಅಪಥ್ಯವಾದರೂ ಸಾಗಿಸಲೇ ಬೇಕಾದ ದಾಂಪತ್ಯದ ಮೊದಲ ಹೆಜ್ಜೆ
ಸಂಸಾರವೆಂಬ ಮುರುಕು ರಥಕ್ಕೆ ಮತ್ತೊಂದು ಪಂಕ್ಚರ್ ಚಕ್ರ ಜೋಡಿಸುವ ಯೋಜನೆ
ಅವರಿಗೆ ಮದುವೆಯಾಯಿತು. ಇಲ್ಲಿಗೆ ಕತೆ ಮುಗಿಯಿತು
ಇದೂ ಅನುವಂಶಿಕವೇ
ಮದುವೆಯ ತನಕ ಮಾಡಿದ ಅಪಾಪೋಲಿತನಕ್ಕೆಲ್ಲ ಅಧಿಕೃತ ಮುದ್ರೆ ಒತ್ತುವ ಸಂದರ್ಭ
ಯಾವ ಉದ್ದೇಶದಿಂದ ಮದುವೆಯಾಗುತ್ತೀರೋ ಅದನ್ನೇ ಮರೆಸುವ ಮಾಯೆ
ಇರುವ ಸಾಲ ಸಾಲದೆಂಬಂತೆ ಇನ್ನಷ್ಟು ಹೊತ್ತುಕೊಳ್ಳಲು ಕಾರಣವಾದದ್ದು
ಇದು ವಿಜೃಂಭಣೆಯ ಪರಮಾವಧಿಗೊಂದು ಉದಾಹರಣೆ
ಶಾಲೆಯಲ್ಲಿ ಕೊಡುವ ಪನಿಷ್ಮೆಂಟ್ಗೆ ಮದುವೆ ಮಾಡಿಸುತ್ತೇನೆ ನಿಲ್ಲು ಎನ್ನುತ್ತಿದ್ದರು
ಮದುವೆ ಪತ್ರಿಕೆಯಲ್ಲಿ ಚಿರಂಜೀವಿ ಇಂಥ ವರ ಎಂದು ಬರೆಸುವುದಕ್ಕೆ ಕಾರಣ. ಮದುವೆಯ ನಂತರ ಬದುಕು ದೀರ್ಫವೆನಿಸುವುದರಿಂದ
ಎಂಟು ವಿಧದ ವಿವಾಹವಿದೆ. ಆದರೆ ಡೈವೋರ್ಸ್ಗೆ ಒಂದೇ
ಹನಿಯಷ್ಟಾದರೂ ಸುಖ ಅನುಭವಿ ಸುವ ಏಕೈಕ ಅವಕಾಶವಾದದ್ದರಿಂದ ಅದು ಹನಿಮೂನ್
ವಿಶ್ವನಾಥ ಸುಂಕಸಾಳ