ಜನಸಂಖ್ಯಾ 'ಸ್ಫೋಟ'ಕ್ಕೆ ಕಾರಣವಾದ್ ಬಾಂಬ್
ಗುರುಹಿರಿಯರ ಅನುಮತಿಯಿಂದ ಆಗುವುದೇ ಉತ್ತಮ. ಎಲ್ಲ ತಪ್ಪು ನಿರ್ಧಾರಗಳನ್ನೂ ನಾವಷ್ಟೇ ನಿರ್ಧರಿಸಬಾರದು
ವಿವಾಹವಾಗಬಾರದೆಂಬುದು ತಪ್ಪೇ ಇರಬಹುದು. ಆದರೆ ಆಗುವುದು ಮಾತ್ರ ಮೂರ್ಖತನವೇ
ನಿಮ್ಮನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆಂದರೆ ಮದುವೆಯಾಗಿ. ನಿತ್ಯವೂ ಯಾರೋ ವಾಚ್ ಮಾಡುತ್ತಿದ್ದರೆಂದು ಅನಿಸುತ್ತೆ
ನಮ್ಮವರ ಮದುವೆಗೆ ಹೋಗಲೇಬೇಕು. ಕಷ್ಟದಲ್ಲಿ ಆದವನೇ ಬಂಧು
ವಧೂವರರು ಒಟ್ಟಿಗೇ ಖುಷಿಯಿಂದ ಇರುವ ಅಪರೂಪದ ಕ್ಷಣ
ಗಂಡು ಗಂಡನಾಗುವ ಪ್ರಕ್ರಿಯೆ
ಮದುವೆಯಿಂದ ಪ್ರಾರಂಭವಾದ ಕತೆ ಸುಖಾಂತ್ಯಗೊಂಡರೆ ಅದು ಕೇವಲ ಕಾಲ್ಪನಿಕ
ಬ್ರಹ್ಮನ ಸುಂದರ ಸೃಷ್ಟಿಯ ಸೌಂದರ್ಯವರ್ಧಕ
ಮದುವೆಗಳೆಲ್ಲ ಸ್ವರ್ಗದಲ್ಲೇ ನಿಶ್ಚಿತವಾಗುತ್ತವೆ. ರಿಸೆಪ್ಶನ್ ಮಾತ್ರ ಇಲ್ಲಿ
ಉಚಿತ ಪಾಯಸದೂಟ. ನೆಂಟರಿಷ್ಟರ ಕೂಟ
ಮದುವೆಗಿಂತ ಮೊದಲು ಯೋಧ. ನಂತರ ಸ್ವಾತಂತ್ರ್ಯ ಹೊರಾಟಗಾರ
ಮದುವೆಯ ನಂತರ ಸುಖವೇನೆಂದು ಅರಿವಾಗುತ್ತೆ ಮತ್ತು ಅದು ಮದುವೆಯಾಗುವ ತನಕ ಇತ್ತು ಎಂದೂ ತಿಳಿಯುತ್ತೆ
ಮದುವೆಯಲ್ಲಿ ಆಗುವ ಅಪವ್ಯಯ ಮುಂದಿನದರ ಸೂಚಕ
-ವಿಶ್ವನಾಥ ಸುಂಕಸಾಳ