ಗಂಡನ 'ಪ್ರಾಣಪ್ರಿಯೆ' ಇದು ಬಹುವ್ರೀಹಿ ಸಮಾಸ. (ಗಂಡನ ಪ್ರಾಣವು ಯಾರಿಗೆ ಪ್ರಿಯವೋ ಅವಳು)
ಹೆಂಡತಿ-ಪ್ರಾಣ ಹಿಂಡುತಿ ಎಂಬುದು ಕವಿವಾಣಿ
ಇವಳಿರುವುದರಿಂದಲೇ ಗಂಡನ ಬುದ್ಧಿಗೆ ಸ್ವಲ್ಪವಾದರೂ ಕೆಲಸ ಸಿಗುತ್ತಿರುವುದು
ಮನೆ ಬೆಳಗುವವಳು (ಲೈಟ್ ಆಫ್ಮಾಡುವುದೇ ಇಲ್ಲ)
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಿಮಗದು ಕೋಟಿ ರೂಪಾಯಿ. ಇಬ್ಬರಿದ್ದರೆ ನೀವು ಒಬ್ಬ ಬಡಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... ಹೊರಗಡೆ ಹೋದರೆ ಗಂಡನಿಗೆ ಶಾಪಿಂಗ್ ಭಯ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... ಹೊರಗಡೆ ಹೋದ ಗಂಡನಿಗೆ ಸ್ವಲ್ಪ ಸ್ವಾತಂತ್ರ್ಯ
ಇವಳು ನಿಮ್ಮ ಬೆನ್ನಿಗಿದ್ದರೆ ನೀವು ಒಬ್ಬ ಸಿಪಾಯಿ
ಇವಳ ಬೆನ್ನಿಗೆ ನೀವಿದ್ದರೆ ನಿಮಗವಳು ನಿರಪಾಯಿ
ನಿಮ್ಮ ಅರೆಬರೆತನವನ್ನೆಲ್ಲ ಸಹಿಸಿಕೊಂಡು ತನ್ನ ಅರ್ಧ ಜೀವನವನ್ನೇ ಧಾರೆಯೆರೆದು ಪೂರ್ಣಳಾಗಿಸುವ ಅಧಾಂರ್ಗಿ
ನಿಮ್ಮೆಲ್ಲ ವಿಜಯಗಳ ಹಿಂದಿರವ- ಭಾರ್ಯ
ಜೀವನದ ಸಾಥಿ ಈ ಸತಿ
ಇವಳು ಸರಿಯಿದ್ದರೆ ಗೃಹಿಣೀ ಗೃಹಮುಚ್ಯತೆ, ಅನ್ಯಥಾ ಗೃಹ ಮುಚ್ಚುತ್ತೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com