ಬಾಲದಂತೆ ಹಿಂಬಾಲಿಸುವವ
ಅನುಕರಣೆಯ ಬೆನ್ನುಬಿದ್ದವ
ಸ್ವಬುದ್ಧಿಯಿಲ್ಲದವ, ಹಾಗಾಗಿಯೇ ಈತ ಹಿಂ-ಬಾಲಕ
ಗೆದ್ದಾಗ ನಮ್ಮ ಬಾಲ ಹಿಡಿದವ, ಸೋತಾಗ ಜುಟ್ಟು ಹಿಡಿದವ
ಅಭಿಮಾನೀ ದೆವ್ವ
ಕತ್ತಲೆಯಲ್ಲೂ ಬೆನ್ನುಬಿಡದ ನೆರಳು
ಹಣ, ಅಧಿಕಾರ ಮತ್ತು ಕೀರ್ತಿ ತಂದುಕೊಡೋದು ಇವರನ್ನೇ
ಆಜ್ಞಾಧಾರಕ ಗಂಡ
ನಿಮ್ಮನ್ನೇ ಅನುಸರಿಸಿ ನಿಮ್ಮ ದಾರಿಯನ್ನೇ ತಪ್ಪಿಸುವವ
ಲಕ ಲಕ ಹೊಳೆಯುವ ಬಾಲೆಯ ಹಿಂದೆ ಹಿಂಬಾಲಕರಿಗೇನು ಕೊರತೆಯೇ?
ಇವನೊಂಥರ ಚೇಲಾ ಅಥವಾ ಹರಿದ ಚೀಲ
ಇವನ ನಾಲಿಗೆಯೇ ಶೂಲ, ಹೊಗಳಿಕೆಯೇ ನೇಣುಗಂಭವಯ್ಯಾ...
ಅನುನಯವನ್ನು ನಟಿಸುವವ
ನಿಮ್ಮಿಂದ ಸಾಲವನ್ನು ಪಡೆದು ನಿಮ್ಮನ್ನೇ ಚೊಕ್ಕ ಮಾಡುವ ಚೊಕ್ಕ ಸಾಲಿಗ
-ವಿಶ್ವನಾಥ ಸುಂಕಸಾಳ
vishwasunkasal@yahoo.com