ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಅಥಣಿಯ ಸಿದ್ದಾರ್ಥನಗರದಿಂದ ರಂಜಿತಾ ರಣಸಿಂಗೆ ಅವರು ಪತ್ರಬರೆದಿದ್ದಾರೆ. ಅವರು ಬರೆಯುತ್ತಾರೆ-
'ಫೆಬ್ರವರಿ 2, ಶನಿವಾರದ 'ಬೈಟುಕಾಫಿ' ಮುಖಪುಟದಲ್ಲಿ 'ಏಳಿ ಹೋಗೋಣ ಏಳು ಆಯಾಮಕ್ಕೆ' ಎನ್ನುವ ಲೇಖನದ ನಾಲ್ಕನೇ ಸಾಲಿನಲ್ಲಿ 'ನೀವು ಕೂತ ಕಡೆ ಭೂಕಂಪ...ಮರುಕ್ಷಣದಲ್ಲಿ ತ್ಸುನಾಮಿ' ಅಂತಾಗಿದೆ. ಅದು 'ಸುನಾಮಿ' ಆಗಬೇಕಿತ್ತು.'
'ಅದೇ ಪುಟದಲ್ಲಿ 'ದೋಸೆಗೆ ನೀರು' ಅನ್ನುವ ಲೇಖನದಲ್ಲಿ ಕೂಡಾ ನಾಲ್ಕನೇ ಪ್ಯಾರಾದಲ್ಲಿ 'ಡಿಇದೇ' ನಿರ್ದೇಶಕರು ಅಂತಾಗಿದೆ. ಇದ್ಯಾವ ಹೊಸ ಪದ? ಅದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಅದು 'ಇದೇ' ನಿರ್ದೇಶಕರು ಅಂತಾಗಬೇಕಿತ್ತಲ್ಲವೇ?
'ಪರೀಕ್ಷೆ ಬಂತು ರೆಡಿಯಾಗಿ! ಅಂಕಣದಲ್ಲಿ 'ಅಂದಿನ ಪಾಠವನ್ನು' ಆಗುವ ಬದಲು 'ಅಂದಂದಿನ ಪಾಠವನ್ನು' ಆಗಿದೆ.
'ಫೆಬ್ರವರಿ 3ರ ಮುಖಪುಟದ 'ಯೌವನದಲ್ಲಿ ದಾಸಿ ಮುಪ್ಪಿನಲ್ಲಿ ದೇವದಾಸಿ' ಎಂಬ ಸುದ್ದಿಯಲ್ಲಿ ದೇವಸ್ಥಾನಗಳ ಹೆಸರು ಬರೆಯುವಲ್ಲಿ 'ಚಿಂಚಣಿ ಮಾಯಮ್ಮಾ' ಎಂದು ಬರೆದಿದ್ದೀರಿ. ಅದು 'ಚಿಂಚಲಿ ಮಾಯಕ್ಕಾ' ಎಂದಾಗಬೇಕಿತ್ತು.
'ಇನ್ನು  ಬೆಳಗಾವಿ ಪುಟದಲ್ಲಿ ತಹಸೀಲ್ದಾರರಿಗೆ ಮನವಿ ಮಾಡುವ ಫೋಟೋ ತೋರಿಸಿದ್ದೀರಿ. ಆದರೆ ಕೆಳಗೆ 'ತಲೆ ಬರಹ ತನಿಖೆಗೆ ಆಗ್ರಹಿಸಿ ಜೆ.ಎ. ಶಿಕ್ಷಣ ಸಂಸ್ಥೆ ಅಧಕ್ಷರಿಗೆ ಮನವಿ ನೀಡಿದರು' ಅಂತ ಬರೆದಿದ್ದೀರಿ. ಕೊನೆಯಲ್ಲಿ 'ತಹಸಿಲ್ದಾರ ಮನವಿ ಸ್ವೀಕರಿಸಿದರು' ಅಂತಾ ಉಲ್ಲೇಖಿಸಿದ್ದೀರಿ. ಒಟ್ಟಿನಲ್ಲಿ ಯಾರು, ಯಾರಿಗೆ ಮನವಿ ಕೊಟ್ಟರು ತಿಳಿಯಲಿಲ್ಲ!
ಬೆಂಗಳೂರಿನ ವಿ. ಹೇಮಂತಕುಮಾರ್ ಬರೆಯುತ್ತಾರೆ: 'ಮಾರ್ಚ್ 16ರ ಸಂಚಿಕೆಯ ಮೊದಲ ಪುಟದ 'ನಾವೀಗ ಕಾವೇರಿ ಭಿಕ್ಷುಕರು' ಶಿರೋನಾಮೆಯ ಲೇಖನದಲ್ಲಿ ಇವರಿಗೆ 'ಕಾವೇರಿಗಿಂಥ' ಎಂದಿದೆ. 'ಕಾವೇರಿಗಿಂತ' ಎಂದಿರಬೇಕಿದ್ದು. ಅದೇ ಲೇಖನದ ಮುಂದುವರಿದ ಭಾಗ 12ನೇ ಪುಟದಲ್ಲಿ ಜಗದೀಶ್ ಶೆಟ್ಟರ ಮನೆ ಬಾಗಿಲಿಗೆ ನಾಲ್ಕು ಬಾರಿ ಅಲೆದು 'ಬಂದಿದ್ದಾನೆ' ಎಂದು ಬರೆಯಲಾಗಿದೆ, ಅದು 'ಬಂದಿದ್ದೇನೆ' ಎಂದಾಗಬೇಕಿತ್ತು. ಕಾವೇರಿ 'ವ್ಯಾಜ್ಯಕ್ಕಿಂಥ' ಇದು 'ವ್ಯಾಜ್ಯಕ್ಕಿಂತ' ಇರಬೇಕಿತ್ತು. 'ಮತ್ತೇ' ಅಂತರ್ಜಲದಲ್ಲಿ ಎಂಬಲ್ಲಿ 'ಮತ್ತೆ' ಸಾಕಿತ್ತು. 'ಕಾಂಗ್ರಸ್ -ಜೆಡಿಎಸ್' ಸಮ್ಮಿಶ್ರದಲ್ಲಿ 'ಕಾಂಗ್ರೆಸ್' ಆಗಬೇಕಿತ್ತು. ಅದೇ ಲೇಖನದಲ್ಲಿ 'ದೇಶಾದ್ಯಂದ' ಎಂದಿದೆ. ಅದು 'ದೇಶಾದ್ಯಂತ' ಎಂದೂ, 'ಸುಪ್ರೀಶಕೋರ್ಟ್' ಎಂದಿರುವುದು 'ಸುಪ್ರೀಂಕೋರ್ಟ್' ಎಂದಿರಬೇಕಿತ್ತಲ್ಲವೇ?
'ಅದೇ ಪುಟದ ಮೇಲ್ಭಾಗದಲ್ಲಿ 'ಡಾ. ಪಿ. ವೆಂಕಟ್ರಾಯ ಭಂಡಾರಿಗೆ ಸಂಯಮ ಪ್ರಶಸ್ತಿ ಪ್ರದಾನ' ಲೇಖನದಲ್ಲಿ ಸಮಾರಂಭದ 'ಅಧ್ಯಕ್ಷೆ' ವಹಿಸಿ ಎಂದಿದೆ. ಅದು 'ಅಧ್ಯಕ್ಷತೆ' ಎಂದಿರಬೇಕಿತ್ತು.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.