ಸಾಹಿತ್ಯ ಸಮ್ಮೇಳನ

Updated on: 

ಸರ್ಕಾರದ ದುಡ್ಡು ಸಾಹಿತ್ಯದ ಜಾತ್ರೆ
    ಸಾಹಿತ್ಯದ 'ರುಚಿ' ನೋಡಲು ಇಲ್ಲಿ ಬರಬಹುದು
    ಮೆರವಣಿಗೆ, ಡ್ರಮ್ಮು, ಭಾಷಣ, ಭೋಜನ
    ಪುಸ್ತಕ ಕೊಳ್ಳುವವರಿಗೆ ಸ್ವರ್ಗ, ಮಾರುವವರಿಗೆ ನರಕ
    ಇಲ್ಲಿ ಸ್ವೀಕರಿಸುವ ನಿರ್ಣಯಗಳು ಹೆಚ್ಚಿನವು ಈಡೇರವು. ಈಡೇರಿಸಲು ಸಾಧ್ಯವಾಗದ್ದು
    ಸರ್ಕಾರೀ ನೌಕರರು ಓಡಿ ಬಂದು, ನಗರವನ್ನೆಲ್ಲ ಸುತ್ತಿ 'ಓಡಿ' ಪಡೆದು ಓಡಿ ಹೋಗುವದಕ್ಕೊಂದು ನೆಪ
    ಓದಲು ಬಾರದಿದ್ದವರೂ ಇಲ್ಲಿ ಬಂದು ಸಾಹಿತ್ಯದ ರಸಪಾಕವನ್ನು ಹೊಟ್ಟೆ ತುಂಬಾ ಹೀರಿ ಹೋಗಬಹುದು
    ಕೆಲವಷ್ಟು ಜನರಿಗೆ ವೇದಿಕೆ ಮತ್ತು ಮೈಕ್ ದೊರೆಯುವ ಏಕೈಕ ಅವಕಾಶ
    ಇಲ್ಲಿ ಪಕ್ಕಾ ಸಾಹಿತಿಗಳಿಗೆ ಮತ್ತು ಪಕ್ಕಾ ಓದುಗರಿಗೆ ಜಾಗ ಕಡಿಮೆ
    ಸರ್ವಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆದು ತಂದು ವೇದಿಕೆಯ ಮೇಲೆ ಏಕಾಂಗಿಯಾಗಿ ಬಿಡುವ ಸಂದರ್ಭ
    ಒಂದೊಂದು ಗೋಷ್ಠಿಗೂ ಒಂದೊಂದು ಬಣ್ಣ, ಎದುರಿನ ಖುರ್ಚಿಯೆಲ್ಲ ಖಾಲಿಯೋ ಅಣ್ಣಾ...
    ಸರ್ಕಾರ ಕೊಡುವ ಕೋಟಿ ಕಪ್ಪ, ನುಂಗಿ ನೊಣೆಯಲೊಂದು ನೆಪ
    ಪ್ರಥಮ ಸಾಹಿತ್ಯ ಸಮ್ಮೇಳನಕ್ಕೂ ಇದಕ್ಕೂ ವ್ಯತ್ಯಾಸವೆಂದರೆ ಮೊದಲು ಊಟವಿರುತ್ತಿರಲಿಲ್ಲ. ಸಾಹಿತ್ಯವಿರುತ್ತಿತ್ತು
    ವೇದಿಕೆ ಮೇಲೆ ವೀರ ಸಾಹಿತಿ, ಇಳಿದ ಮೇಲೆ ಬಾರು ಸಾಹಿತಿ
    ಅಡಂಬೊಲ, ಅಡಂಬರ, ಕಳಕಳಿಗೆ ಮಾತ್ರ ಬರ
    ಪುಸ್ತಕಗಳಿಗೆಲ್ಲ ಇಲ್ಲಿ ಸಾಮೂಹಿಕ ಪ್ರಸವ
    ಅವ್ಯವಸ್ಥೆ, ಅಶಿಸ್ತು, ಅಶ್ರದ್ಧೆಗೆ ಇದೊಂದು ದೃಷ್ಟಾಂತ
    ಕರೆ ನೀಡುವ ಮೂಲಕ ಕರಕರೆ ನೀಡುವುದು

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com