ಸಮಸ್ಯೆ
ಸಮಸ್ಯೆಯ ವೈಶಿಷ್ಟವೆಂದರೆ ಒಂದೇ ಸಮಸ್ಯೆ ಮತ್ತೆ ಮತ್ತೆ ಬರುವುದಿಲ್ಲ. ಪ್ರತಿ ಸಲವೂ ಹೊಸ ಸಮಸ್ಯೆಗಳೇ ಬರುವುದು.
ಸಮಸ್ಯೆಗಳನ್ನು ಹೆಚ್ಚು ಹೆಚ್ಚು ಎದುರಿಸುವುದರಿಂದ ಅನುಭವವೇನೋ ಸಿಗುತ್ತೆ, ಆದರೆ ಅದು ಮುಂದಿನ ಸಲ ಕೆಲಸಕ್ಕೆ ಬಾರದು
ತಲೆ ಇರುವುದೇ ಸಮಸ್ಯೆಗಳನ್ನು ಹೊರಲು
ಸಮಸ್ಯೆಗಳೇ ಇಲ್ಲದಿದ್ದರೆ ಅದಕ್ಕೆ ಪರಿಹಾರ ಹೇಳುವ ಜ್ಯೋತಿಷಿಗಳಿಗೆ, ಆಪ್ತ ಸಲಹೆಗಾರರಿಗೆಲ್ಲ ಕೆಲಸವಿಲ್ಲದೇ ಸಮಸ್ಯೆಗಳಾಗುತ್ತಿತ್ತು
ಗಂಡಸರಿಗೆ ಗಡ್ಡವೇ ಒಂದು ಸಮಸ್ಯೆ, ಕೆಲವೊಮ್ಮೆ ಹೆಂಡತಿಗೂ..
ಇದೊಂಥರ ಪ್ರೇಮ ಇದ್ದ ಹಾಗೆ. ಎಲ್ಲಿ ಹುಟ್ಟಿತೆಂದೇ ತಿಳಿಯುವುದಿಲ್ಲ
ಸಮಸ್ಯೆಗಳಿಗೆ ಭಯಪಡಬಾರದು, ಯಾಕೆಂದರೆ ಭಯಪಡುವುದೇ ಒಂದು ಸಮಸ್ಯೆ
ಸಮಯಕ್ಕೆ ಸರಿಯಾಗಿ ಕಾರ್ಯಗಳಾದರೆ ಸಮಸ್ಯೆಗಳಿಲ್ಲ ಆದರೆ..
ಸಮಸ್ಯೆಗಳಿಂದಲೇ ಕೆಲವು ಸಲ ಸಮಯಕ್ಕೆ ಸರಿಯಾಗಿ ಕಾರ್ಯಗಳಾಗುವುದಿಲ್ಲ
ಎಲ್ಲವೂ ಸಮವಾಗಿದ್ದರೆ ಸಮಸ್ಯೆ ತಲೆದೋರದು
ಜೀವನ ಬೋರ್ ಆಗದಿರಬೇಕೆಂದರೆ ಯಾವುದಾದರೂ ಒಂದು ಸಮಸ್ಯೆ ಇದ್ದರೆ ಚೆಂದ
ಬಿಡಿ. ಇದರ ಬಗ್ಗೆ ಎಷ್ಟು ಹೇಳಿದರೂ ಅಷ್ಟೇ.. ಯಾರಿಗ್ ಹೇಳೋಣ ನಮ್ ಪ್ರಾಬ್ಲೆಮ್ಮು..
-ವಿಶ್ವನಾಥ ಸುಂಕಸಾಳ
vishwasunkasal@yahoo.com