ಜಾತಿ
ವ್ಯಕ್ತಿಗೊಂದು ಜಾತಿ, ಜಾತಿಗೊಂದು ನೀತಿ
ಜಾತಿ ನಿಜವಾಗಿಯೂ ನಿರ್ಮೂಲವಾಗಬೇಕೆಂದರೆ ಅದರ ಕುರಿತಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು
ಹೊರಹೊರಗೆ ಜಾತಿ ಬೇಡ ಜಾತಿ, ಆದರೆ ಒಳಗೊಳಗೇ ಸ್ಫುರಿಸುವುದು ಕಕ್ಕುಲಾತಿ
ತಾವು ಕೆಳಜಾತಿ ಎನ್ನುವ ವರ್ಗೀಕರಣವನ್ನು ಒಪ್ಪುವರಿರುವ ತನಕ ತಾವು ಮೇಲ್ಜಾತಿ ಎಂದು ಬೀಗುವವರು ಇದ್ದೇ ಇರುತ್ತಾರೆ
ಹೋರಾಟ ಹೊಡೆದಾಟ ಭಾಷಣಗಳಿಂದ ಜಾತಿ ಪದ್ಧತಿಯ ನಾಶವಾಗುತ್ತದೆಂದು ನಂಬಿಸಿದ್ದು ರಾಜಕಾರಣಿಗಳ ಮೊದಲ ಯಶಸ್ವೀ ಕುತಂತ್ರ
ನನಗೆ ಯಾವ ಜಾತಿಯೂ ಇಲ್ಲ ಎಂದು ಹೇಳಿ ನೋಡಿ, ಜನ ನಿಮ್ಮನ್ನು ಅನಾಥರು ಎಂಬಂತೆ ಕನಿಕರಿಸುತ್ತಾರೆ
ಇರುವುದು ಎರಡೇ ಜಾತಿ. ಒಂದು ಮನುಷ್ಯ ಜಾತಿ. ಇನ್ನೊಂದು ಜಾತಿ ಹುಯಿಲೆಬ್ಬಿಸಿ ಬೇಳೆ ಬೇಯಿಸಿಕೊಳ್ಳುವನೀಚ ರಾಜಕಾರಣಿಗಳ ಜಾತಿ
ರಾಜಕಾರಣಿಗಳ ಮತ ಬ್ಯಾಂಕ್
ಕಾವಿಧಾರಿಗಳ ಸಂಪನ್ಮೂಲ
ಢೋಂಗಿ ಜಾತ್ಯತೀತರ ಪ್ರಚಾರ ಸರಕು
ಸಾವಿಲ್ಲದ ಸರದಾರ
ಜಾತಿ ಅಹಂಕಾರಕ್ಕೆ ಉದಾಸೀನವೇ ಮದ್ದು
ಇದಿಲ್ಲದಿದ್ದರೆ ಅದೆಷ್ಟೋ ರಾಜಕಾರಣಿಗಳು, ಮಠಗಳು ಬಡವಾಗುತ್ತಿದ್ದವು
ಶಿಷ್ಟರು- ಪರಿಶಿಷ್ಟರೆಂದು ಭೇದವೆಣಿಸಲು ಕಾರಣವಾದದ್ದು
ಮೊದಲೇ ಕೋತಿ ಬುದ್ಧಿ, ಅದಕ್ಕೆ ಜಾತಿ ಅಫೀಮು
ಭಾರತೀಯರನ್ನು ಭಾರತೀಯರೇ ಒಡೆದು ಆಳುವ ನೀತಿ-ಈ ಜಾತಿ
ವಿಶ್ವನಾಥ ಸುಂಕಸಾಳ
vishwasunkasal@yahoo.com