ಸಂಪಾದಕೀಯ

ಅಶ್ಲೀಲಕ್ಕೂ ಸರಸಕ್ಕೂ ಇರುವ ಭಿನ್ನತೆ ಏನು?

Published On :

ನೇರಲಗುಡ್ಡ ಶಿವಕುಮಾರ್, ಸಿರಾ, 9480343742
ಅಶ್ಲೀಲಕ್ಕೂ ಸರಸಕ್ಕೂ ಇರುವ ಭಿನ್ನತೆ ಏನು?
ಹೆಂಡತಿಯೊಂದಿಗೆ ಸರಸ, ಪರರೊಂದಿಗೂ ಹಾಗೇ ವರ್ತಿಸಿದರೆ ಅಶ್ಲೀಲ

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೀತಿಸಿದ ಹುಡುಗಿಗೆ ಗುಲಾಬಿ ಹೂವನ್ನೇಕೆ ಕೊಡುವುದು?
ಅದು ಒಂಥರಾ ಲಾಬಿ, ಅದಕ್ಕೇ ಗುಲಾಬಿ!

ಬರ್ಕಲಿರಮೇಶ ಕಿರಗಂದೂರು, ಮಂಡ್ಯ
ನನ್ನವಳ್ಯಾಕೋ ಇತ್ತೀಚೆಗೆ ಹಾವಿನಂತೆ ಪೂತ್ಕರಿಸುತ್ತಿದ್ದಾಳೆ. ನಾ ಏನು ಮಾಡಲಿ?
ಪುಂಗಿ ಊದುವುದು ಬಿಟ್ಟು ಬೇರೆ ಆಯ್ಕೆಯಿಲ್ಲ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಇತ್ತೀಚೆಗೆ ದೇವಮಾನವ ಎಂದೆನಿಸಿಕೊಂಡವರು ಹೆಣ್ಣಿನ ವಿಷಯದಲ್ಲಿ ತಮ್ಮ ಹೆಸರನ್ನೇಕೆ ಕೆಡಿಸಿಕೊಳ್ಳುತ್ತಿದ್ದಾರೆ?
ಬೇರೆ ವಿಷಯದಲ್ಲಿ ದೇವರು, ಆ ವಿಷಯದಲ್ಲಿ ಮಾತ್ರ ಮಾನವರು ಎಂದು ಸಾಬೀತುಮಾಡಲು!

ಚಿರಪ್ರಭ ನಂಜನಗೂಡು, 8553793107
ಕೇಂದ್ರ ಸರ್ಕಾರ ಸಮೀಕ್ಷೆಗಳನ್ನು ನಿಷೇಧಿಸುತ್ತಿರುವುದಕ್ಕೆ ನಿಜವಾದ ಕಾರಣ ಏನಿರಬಹುದು?
ಅವೆಲ್ಲ ನಿಜವಾಗಿಬಿಟ್ಟರೆ ಎಂಬ ಭಯ.

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.