ರೈಲು ಬಂತು ಚಿಕ್ಕಮಗಳೂರಿಗೆ
ಹಳೆಯ ಮೈಸೂರು ಸಂಸ್ಥಾನದಲ್ಲಿ ರೈಲ್ವೆ ಸಂಪರ್ಕ ಇಲ್ಲದೇ ಇದ್ದ ಏಕಮಾತ್ರ ಜಿಲ್ಲಾ ಮುಖ್ಯಸ್ಥಳ ಚಿಕ್ಕಮಗಳೂರು. ಕಾಫಿ ನಾಡಿನ ಹೃದಯದಂತಿರುವ ಈ ಊರಿಗೆ ಕಡೂರಿನಿಂದ ರೈಲು ಸಂಪರ್ಕ ಕಲ್ಪಿಸಿಕೊಡಬೇಕೆನ್ನುವ ಬೇಡಿಕೆ ಬಹಳ ಹಳೆಯದು.
ಅಂದಿನಿಂದಲೂ, ಈ ಭಾಗದ ಜನ ತಮ್ಮ ಕನಸಿನ ರೈಲ್ವೆ ಸಂಪರ್ಕಕ್ಕೆ ಅವಕಾಶ ಸಿಕ್ಕಾಗಲೆಲ್ಲ ಒತ್ತಾಯ ಪಡಿಸುತ್ತಲೇ ಇದ್ದರು. ಕೆಲವು ಬಾರಿ ಇನ್ನೇನು ಕೆಲಸ ಆರಂಭವಾಗಬೇಕು ಎನ್ನುವ ಸಮಯದಲ್ಲಿ ಒಂದಲ್ಲ ಒಂದು ತಡೆ ಬಂದಿತ್ತು. ಕೊನೆಗೆ 1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದಾಗ, ಅವರು ಆ ಊರಿಗೆ ರೈಲು ಸಂಪರ್ಕದ ಯೋಜನೆಗೆ ಮತ್ತೆ ಚಾಲನೆ ನೀಡಿದರು. ಕೊನೆಗೂ ಮಂಗಳವಾರ ಚಿಕ್ಕಮಗಳೂರಿನಲ್ಲಿ ರೈಲ್ವೆಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಚಿಕ್ಕಮಗಳೂರು-ಕಡೂರು-ಶಿವಮೊಗ್ಗ ಪ್ಯಾಸೆಂಜರ್ಗೆ ಹಸಿರು ಬಾವುಟವನ್ನು ತೋರಿಸಿದಾಗ ಈ ಭಾಗದ ಜನರ ಶತಮಾನಕ್ಕೂ ಹೆಚ್ಚಿನ ಅವಧಿಯ ಕನಸು ಈಡೇರಿತು. ಗ ಈ ಭಾಗದ ಜನರಿಗೆ ಚಿಕ್ಕಮಗಳೂರಿನಿಂದ ನೇರವಾಗಿ ಕಡೂರು ಮಾರ್ಗವಾಗಿ ಬೆಂಗಳೂರು-ಮುಂಬೈಗಳ ರೈಲು ಯಾತ್ರೆ ಸಾಧ್ಯ. ಈ ರೈಲ್ವೆ ಮಾರ್ಗ ಮಲೆನಾಡಿನ ಗರ್ಭದ ಸೀಮೆಯ ಘಟ್ಟಗಳಿಂದ ಇಳಿದು ಮೈದಾನ ಸೀಮೆಯನ್ನು ಪ್ರವೇಶಿಸುವಂತೆ ಆಗಿದ್ದು ಒಂದು ದೊಡ್ಡ ಸಾಧನೆಯೇ. ಈ ಭಾಗದ ಅಭಿವೃದ್ಧಿಗೆ ರೈಲು ಮಾರ್ಗವನ್ನು ಸರಿಯಾಗಿ ಬಳಸಿಕೊಳ್ಳುವುದು ಈಗ ಸರ್ಕಾರದ ಕರ್ತವ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

