ಅಂಕಗಳ ಅನ್ಯಾಯ
ಮೊದಲ ಮೌಲ್ಯಮಾಪನದಲ್ಲೇ ಒಂದು ಅಂಕ ಮರು ಮೌಲ್ಯಮಾಪನದಲ್ಲಿ ಮತ್ತೊಂದು ಅಂಕ. ಈ ರೀತಿ ಬೇಕಾ ಬಿಟ್ಟಿ ಅಂಕ ನೀಡಿರುವುದು ಎಷ್ಟು ಸರಿ.?
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ನಾನು ಕೆಎಎಸ್ ಪರೀಕ್ಷೆ ತೆಗೆದುಕೊಂಡಾಗ ಮೊದಲ ಬಾರಿಗೆ ಉತ್ತಮ ಅಂಕಗಳಿಸಿದ್ದೇನೆ. ಎರಡನೇ ಬಾರಿ ಮರು ಮೌಲ್ಯಮಾಪನಕ್ಕೆ ಒಳಗಾದಾಗ 238 ಅಂಕಗಳು ವ್ಯತ್ಯಾಸ ಬಂದಿರುವುದರಿಂದ ಮನನೊಂದು ಶೋಧನಾ ಸಮಿತಿಗೆ ಪತ್ರ ಬರೆದಿದ್ದೇನೆ.
1999ರಲ್ಲಿ (ನೋಂದಣಿ ಸಂಖ್ಯೆ 114800) ಪರೀಕ್ಷೆ ಬರೆದು 1800 ಅಂಕಗಳಿಗೆ 871 ಪಡೆದುಕೊಂಡು ಸಂದರ್ಶನಕ್ಕೆ ಆಯ್ಕೆಯಾಗಿದ್ದೆ. ಜು.13 2000ರಂದು ಸಂದರ್ಶನ ನಡೆಯಿತು. ಸಂದರ್ಶನದಲ್ಲಿ 200 ಅಂಕಗಳಿಗೆ ಕೇವಲ 52 ಅಂಕಗಳು ಮಾತ್ರವೇ ನೀಡಿದ್ದಾರೆ. ಮೊದಲ ಮುಖ್ಯ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕಗಳಿಗೂ ಮತ್ತು ಮರುಮೌಲ್ಯಮಾಪನದ ಅಂಕಗಳಿಗೂ 238 ಅಂಕ ಕಡಿಮೆ ಇರುವುದರಿಂದ ಯಾರನ್ನು ರಕ್ಷಿಸಲು ನನ್ನನ್ನು ಬಲಿಪಶು ಮಾಡಲಾಯಿತು?
ಐಚ್ಛಿಕ ವಿಚಾರಗಳಾದ ರಾಜ್ಯಶಾಸ್ತ್ರ ವಿಷಯದಲ್ಲಿ ಮೊದಲ ಮೌಲ್ಯಮಾಪನದಲ್ಲಿ 164 ಅಂಕಗಳನ್ನು ಪಡೆದಿದ್ದು, ಎರಡನೇ ಬಾರಿಯ ಮೌಲ್ಯಮಾಪನದಲ್ಲಿ ಕೇವಲ 54 ಅಂಕಗಳನ್ನು ನೀಡಿದ್ದಾರೆ. 110 ಅಂಕಗಳ ವ್ಯತ್ಯಾಸ ಒಂದೇ ವಿಷಯದಲ್ಲಿ ಹೇಗೆ ನೀಡಲಾಯಿತು ಎಂಬುವುದಕ್ಕೆ ಉತ್ತರ ನೀಡಿ ನ್ಯಾಯ ದೊರಕಿಸಿ ಕೊಡಿ.
- ಬಿ.ಎಚ್. ದೊಡ್ಡಹನುಮಂತಯ್ಯ, ಅನ್ಯಾಯಕ್ಕೊಳಗಾದವನು
ತಿರುಪತಿಯಲ್ಲಿ ಮುಸ್ಲಿಂ ವಿ.ವಿ. ಬೇಡ
ಆಂಧ್ರ ಪ್ರದೇಶದ ತಿರುಪತಿಯಲ್ಲಿ ಇಸ್ಲಾಮಿಕ್ ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಟಿರುವುದು ಸರ್ವತಾ ಯೋಗ್ಯವಾದ ವಿಚಾರವಲ್ಲ. ಈ ಹಿಂದೆ ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಗಳಾಗಿದ್ದಾಗ ಇದೇ ರೀತಿ ಚರ್ಚ್ ಸಂಕೀರ್ಣವನ್ನು ಕಟ್ಟಿಸಲು ಪ್ರಯತ್ನಿಸಿ ಹಿಂದುಗಳ ವಿರೋಧದ ನಂತರ ನಿರ್ಣಯವನ್ನು ಹಿಂತೆಗೆದುಕೊಂಡಿದ್ದರು.
ತಿರುಪತಿಯ ಚಂದ್ರಗಿರಿಯಲ್ಲಿ ವಿಷ್ಣು ದೇವಾಲಯದ ಆವರಣದ ಹತ್ತಿರ 'ಹೀರಾ ಇಂಟರ್ನ್ಯಾಷನಲ್ ಇಸ್ಲಾಮಿಕ್ ವಿಶ್ವವಿದ್ಯಾಲಯ'ವು ತಿರುಪತಿ ಪ್ರಾಧಿಕಾರದ ಅನುಮತಿ ಪಡೆಯದೇ ಕಾಮಗಾರಿಯನ್ನು ಪ್ರಾರಂಭಿಸಿರುವುದು ಮೇಲ್ನೋಟಕ್ಕೆ ಅಕ್ರಮವೆಂದು ಅನಿಸುತ್ತದೆ. ಮೇಲಾಗಿ ತಿರುಪತಿ ಬೆಟ್ಟವು ಹಿಂದುಗಳ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ಯಾವುದೇ ಇತರ ಧರ್ಮದ ಚಟುವಟಿಕೆಗಳಿಗೆ ಆಸ್ಪದ ನೀಡುವುದು ಸಮಂಜಸವಲ್ಲ. ಹಿಂದೂ ಧಾರ್ಮಿಕ ಕ್ಷೇತ್ರದ ವಾತಾವರಣವನ್ನು ಕಲುಷಿತಗೊಳಿಸುವ ಇಂತಹ ಪ್ರಯತ್ನ ಖಂಡನೀಯ. ಮುಂದೆ ಇದು ಕೋಮು ಸಂಘರ್ಷಕ್ಕೆ ಕಾರಣವಾಗಿ ವಿವಾದಿತ ಕ್ಷೇತ್ರವಾಗಬಾರದು.
ಈಗಾಗಲೇ ದೇಶದಲ್ಲಿ ಅನೇಕ ಕಡೆ (ಕರ್ನಾಟಕದ ದತ್ತಪೀಠ, ಮಧ್ಯಪ್ರದೇಶದ ಭೋಜಶಾಲೆ, ಅಯೋಧ್ಯೆಯ ರಾಮಮಂದಿರ, ಕಾಶಿ ಹಾಗೂ ಮಥುರಾಗಳು ಸೇರಿದಂತೆ) ಧಾರ್ಮಿಕ ಕ್ಷೇತ್ರಗಳ ಬಗ್ಗೆ ಹಿಂದೂ ಮುಸ್ಲಿಂರಲ್ಲಿ ಕೋಮು ಘರ್ಷಣೆಗಳು ನಡೆಯುತ್ತಿವೆ. ತಿರುಪತಿಯ ಈ ಮುಸ್ಲಿಂ ವಿಶ್ವವಿದ್ಯಾಲಯ ಇಂತಹ ಸಂಘರ್ಷಗಳಿಗೆ ಮತ್ತೊಂದು ಸೇರ್ಪಡೆ ಎಂದೆನಿಸದಿರಲಿ. ವಿಶ್ವವಿದ್ಯಾಲಯದ ಪ್ರಮುಖರು ಈ ವಿಷಯದಲ್ಲಿ ಪ್ರೌಢತೆ ಮೆರೆಯಲಿ. ಆಂಧ್ರದ ಕಾಂಗ್ರೆಸ್ ಸರ್ಕಾರವು ಈ ಮುಸ್ಲಿಂ ಓಲೈಕೆ ನೀತಿಯನ್ನು ಕೈ ಬಿಟ್ಟು ತಿರುಪತಿಯ ಈ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ನೀಡಿರುವ ಪರವಾನಗಿಯನ್ನು ತಕ್ಷಣ ರದ್ದುಪಡಿಸಲಿ.
-ಶ್ರವಣ್ಕುಮಾರ್ ರಾಯ್ಕರ್, ರಾಜ್ಯಾಧ್ಯಕ್ಷರು
ಹಿಂದೂ ಮಹಾಸಭಾ-ಕರ್ನಾಟಕ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

