ಪಾಲಿಕೆ ಮೀಸಲಿಗೆ ತಡೆ
ಬೃಹತ್ ಬೆಂಗಳೂರು, ಮೈಸೂರು ಮಹಾನಗರ ಪಾಲಿಕೆಗಳನ್ನು ಬಿಟ್ಟು ಉಳಿದ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಸ್ಥಾನಗಳ ಮೀಸಲು ಪ್ರಕಟಣೆಯ ಜಾರಿಗೆ ಕರ್ನಾಟಕ ಹೈಕೋರ್ಟ್ ತಡೆ ಆದೇಶ ನೀಡಿರುವುದು, ಈ ವಿಚಾರದಲ್ಲಿ ಸರ್ಕಾರದ ನಿಲವು ಅಸ್ಪಷ್ಟವಾಗಿರುವುದನ್ನು ತೋರಿಸುತ್ತಿದೆ.
ನಿಜ. ಈಗಾಗಲೇ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿರುವ ಕಡೆಗಳಲ್ಲಿ ತಡೆ ಆದೇಶದ ಜಾರಿಯಾಗುವುದಿಲ್ಲ ಎನ್ನುವ ಷರಾ ಕೂಡಾ ಆದೇಶದಲ್ಲೇ ಇದೆ. ಬೆಂಗಳೂರು - ಮೈಸೂರುಗಳಲ್ಲಿ ಈಗಾಗಲೇ ಚುನಾವಣೆ ಮುಗಿದು ಹೋಗಿದೆ.
ಎಲ್ಲ ಚುನಾಯಿತ ಪೌರಾಡಳಿತ ಸಂಸ್ಥೆಗಳಲ್ಲೂ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನಗಳನ್ನು ಸರದಿಯ ನಿಯಮದಂತೆ ಮೀಸಲಾಗಿಡುವ ಸಾಮಾಜಿಕ ನ್ಯಾಯ ವಿತರಣೆ ವ್ಯವಸ್ಥೆಯನ್ನು ಈಗ ಯಾರೂ ವಿರೋಧಿಸುವಂತಿಲ್ಲ. ಆದರೆ ಮೀಸಲು ಸ್ಥಾನಗಳನ್ನು ನಿಗದಿಪಡಿಸುವ ಅಧಿಕಾರವನ್ನು ಕಾಯಿದೆಯಂತೆ ಪಡೆದುಕೊಂಡಿರುವ ಸರ್ಕಾರ ಯಾವ ಯಾವ ಸಂಸ್ಥೆಗಳಲ್ಲಿ ಯಾವ ಯಾವ ರೀತಿ ಮೀಸಲಿಡಬೇಕೆನ್ನುವುದನ್ನು ಚುನಾವಣೆ ಸಮೀಪದ ಸಮಯದಲ್ಲೇ ಪ್ರಕಟಿಸುವುದೇಕೆ? ಆ ಕೆಲಸವನ್ನು ಮುಂಚೆಯೇ ಮಾಡುವುದು ಸಾಧ್ಯವೇ ಇಲ್ಲವೇ?
ಈ ವಿಚಾರದಲ್ಲಿ ಮೊದಲೇ ವಿವರಗಳನ್ನು ಪ್ರಕಟಿಸಿದರೆ ಆಸಕ್ತ ವಲಯಗಳ ಪ್ರತಿನಿಧಿಗಳಿಗೆ ಅವರ ಪ್ರತಿಕ್ರಿಯೆ ಅಥವಾ ಅಹವಾಲುಗಳನ್ನು ಹೇಳಿಕೊಳ್ಳುವ ಅವಕಾಶ ಸಿಕ್ಕಂತೆ ಆಗುತ್ತದೆ. ಅದಕ್ಕೆ ಅವಕಾಶವೇ ಇಲ್ಲದಂತೆ, ಕೊನೆಯ ನಿಮಿಷದಲ್ಲಿ ಪ್ರಕಟಣೆ ಹೊರಡಿಸಿದರೆ, ಜನ ನ್ಯಾಯದಾನಕ್ಕೆ ಹೈಕೋರ್ಟಿಗೆ ಮೊರೆ ಇಡಬೇಕಾಗುತ್ತದೆ. ಸರ್ಕಾರದ ಈ ನೀತಿಯಲ್ಲಿ ಜನತಾಂತ್ರಿಕ ಸಿದ್ಧಾಂತದ, ಪಾರದರ್ಶಕತೆಯ ಅಭಾವ ಎದ್ದು ಕಂಡಿದೆ. ಇದರಿಂದ ಚುನಾವಣೆ ಮುಂದಕ್ಕೆ ಹೋಗಿ ಜನಪ್ರತಿನಿಧಿಗಳ ಹಕ್ಕು ಮೊಟಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

