ಕಡಿವಾಣ ಹಾಕುವವರು ಯಾರು?
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಗರಣ, ಪಕ್ಷಪಾತ, ಅಧಿಕಾರ ದುರುಪಯೋಗ ಮಾಡಿರುವ ಅನೇಕ ಮಂತ್ರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳು ಯಾವುದೇ ಶಿಕ್ಷೆ ಇಲ್ಲದೆ ಪಾರಾಗುತ್ತಾರೆ. ಕೊಳೆತು ನಾರುತ್ತಿರುವ ರಾಜಕೀಯ ವ್ಯವಸ್ಥೆ ಶುದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಈಚೆಗೆ ನೀಡಿದ ತೀರ್ಪೊಂದು ಮಹತ್ವದ್ದು. ಆದರೆ ಕೇಂದ್ರ ಸರ್ಕಾರ ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರಭಾವಿ ರಾಜಕಾರಣಿಗಳನ್ನು ರಕ್ಷಿಸಲು ಸೆಪ್ಟೆಂಬರ್ 6ರಂದು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದ ಮಸೂದೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ವಿರೋಧಿಸದೆ ಲೋಕಸಭೆಯಲ್ಲಿ ಬೆಂಬಲಿಸಿ ಒಪ್ಪಿಗೆ ನೀಡಿರುವುದು ನಿಜಕ್ಕೂ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಈ ವ್ಯವಸ್ಥೆಗೆ ಕಡಿವಾಣ ಹಾಕುವವರು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಇತ್ತೀಚೆಗೆ ಎಡಿಆರ್. ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ಸರ್ವೆಯಲ್ಲಿ ಮೂರನೇ ಒಂದರಷ್ಟು (ಶೇ.30ರಷ್ಟು) ಹಾಲಿ ಸಂಸದರು ಹಾಗೂ ಇಷ್ಟೇ ಪ್ರಮಾಣದ ಶಾಸಕರು ಕ್ರಿಮಿನಲ್ ಪ್ರಕರಣ ಎದುರಿಸುತ್ತಾರೆ ಎಂಬ ವರದಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ ಸಂಗತಿಯಾಗಿದೆ. ಆದರೆ ಕ್ರಿಮಿನಲ್ ಇತಿಹಾಸ ಇಲ್ಲದೆ ಇದ್ದವರ ಪ್ರಮಾಣ ಕೇವಲ ಶೇ. 12ರಷ್ಟು ಇದೆ ಎಂಬ ವರದಿ ವಾಸ್ತವದಲ್ಲಿ ತಮ್ಮ ವೈಯಕ್ತಿಕ ಹಿತಸಾಧನೆಗೆ ಚಾಣಾಕ್ಷ್ಯ ರಾಜಕಾರಣಿಗಳು ಏನು ಬೇಕಾದರೂ ಮಾಡಿ ಕುಬೇರ ಕೋಟ್ಯಾಧೀಶರಾಗಿ ವಿಜೃಂಭಿಸುತ್ತಿರುವ ವಾತಾವರಣ ನಮ್ಮ ದೇಶಾದ್ಯಂತ ಮೈ ಚಾಚಿದೆ. ಇದೇ ರೀತಿ ಮುಂದುವರಿದರೆ ನಮ್ಮ ದೇಶ ದುಸ್ಥಿತಿಗೆ ಸಿಲುಕುವುದರಲ್ಲಿ ಅಚ್ಚರಿ ಪಡಬೇಕಾಗಿಲ್ಲ.
-ಎಸ್. ನಾಗರಾಜ್, ಚಿಕ್ಕಮಗಳೂರು ಜಿಲ್ಲೆ
ಕೆಎಸ್ಆರ್ಟಿಸಿ ದುರವಸ್ಥೆ
ದಾವಣಗೆರೆ ಡಿಪೋದಿಂದ ದಾವಣಗೆರೆ-ಕಬ್ಬೂರು (ಬೊಮ್ಮೇನಹಳ್ಳಿ) ಮಾರ್ಗದಲ್ಲಿ ಚಲಿಸುತ್ತಿರುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುತ್ತದೆ. ಈ ಮಾರ್ಗದಲ್ಲಿ ಬಹುತೇಕ ವಿದ್ಯಾರ್ಥಿಗಳು, ವೈದ್ಯರು, ಶಿಕ್ಷಕರು, ರೋಗಿಗಳು ಹಾಗೂ ಇನ್ನಿತರೇ ಸಂಬಂಧಿತ ಸರ್ಕಾರಿ ನೌಕರರು ಅಡ್ಡಾಡುತ್ತಿರುತ್ತಾರೆ. ಈ ಬಗ್ಗೆ ಡಿಪೋದವರ ಬಳಿ ಹಲವಾರು ಬಾರಿ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಮಳೆಗಾಲದಲ್ಲಿ ಮಳೆಯಿಂದ ಸೋರುವ ಬಸ್ಸುಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿ, ಆಗಾಗ್ಗೆ ಬಸ್ ಕಂಡಿಷನ್ ದಾರಿ ಮಧ್ಯೆ ಕೈ ಕೊಡುತ್ತಿರುತ್ತದೆ. ವಿಚಾರಣೆ ಸ್ಥಳದಲ್ಲಿ ವಿಚಾರಿಸಿದರೆ ಡಿಪೋಗೆ ಹೋಗಿ ವಿಚಾರಿಸಿ ಎನ್ನುತ್ತಾರೆ. ಡಿಪೋಗೆ ಹೋಗಿ ವಿಚಾರಿಸಿದರೆ ಏಕವಚನದಲ್ಲಿ ದಬಾಯಿಸಿ ಕಳುಹಿಸುತ್ತಾರೆ. ಈ ಕುರಿತು ಯಾರಲ್ಲಿ ದೂರುವುದು? ಖಾಸಗಿ ಮಾರ್ಗ ಪರ್ಮಿಟ್ ಕೊಟ್ಟರೆ ಪರಿಸ್ಥಿತಿ ಸುಧಾರಿಸಬಹುದೇನೋ?
- ಸಿದ್ದಪ್ಪ, ದಾವಣಗೆರೆ
ಬೇಕಿದೆ ರೈತ ಭದ್ರತೆ
ಆಹಾರ ಭದ್ರತೆಯೋ, ಅಧಿಕಾರ ಭದ್ರತೆಯೋ ಎಂಬ ಲೇಖನಕ್ಕೆ ಪೂರಕ ಪ್ರತಿಕ್ರಿಯೆ. ಅಧಿಕಾರ ಭದ್ರತೆಯನ್ನು ಕಾಪಾಡಲು ಹಲವಾರು ಪಕ್ಷಗಳು ಇಂದು ಹೋರಾಟಕ್ಕೆ ಇಳಿದಿವೆ. ಆದರೆ ಒಬ್ಬರಾದರೂ ರೈತನ ಬಗ್ಗೆ ತುಸು ಆಲೋಚಿಸುವ ಪುರುಸೊತ್ತು ಯಾವ ಪಕ್ಷಗಳಿಗೂ ಇಲ್ಲವಾಗಿದೆ. ದೇಶದ ಬೆನ್ನೆಲುಬು ರೈತ, ಅವನೇ ಇಲ್ಲದ ಮೇಲೆ ಯಾವ ಐಶ್ವರ್ಯ ಏನು ಮಾಡುತ್ತೆ? ಈಗಲೂ ಭಾರತದಲ್ಲಿ 62 ಕೋಟಿ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಯಾವ ಬಡವನಿಗೆ ಸರ್ಕಾರ ಎಷ್ಟೇ ಅಕ್ಕಿಯನಮ್ನು ದಾನ ಮಾಡಲಿ. ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ, ಮೊದಲು ಆಹಾರದ ಭದ್ರತೆ ಸಂಪೂರ್ಣ ದೊರೆಯಬೇಕಾದರೆ ರೈತರ ರಕ್ಷಣೆ ಮುಖ್ಯ.
- ಶೋಭಾ ಎಂ.ಹುಬ್ಬಳ್ಳಿ, ಉಜಿರೆ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.comಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

