ಕೃತಿಯ ಸಾಧನೆಯ ಗುಟ್ಟು
ಕೃತಿ ಇದು ಒಬ್ಬ ಬಾಲಕಿಯ ಹೆಸರು. ಇದರಲ್ಲೇನು ವಿಶೇಷ ಎಂದನಿಸಬಹುದು. ಈಕೆ ಭಾರತದ ಮೊದಲ ಪ್ರನಾಳ ಶಿಶು. ಮುಂಬಯಿಯ ಜಯಶ್ರೀ ಮತ್ತು ಸುಭಾಷ್ ಪಾರೇಖ್ ಈ ಶಿಶುವಿನ ತಂದೆತಾಯಿಯಾದರು. ವಿಶ್ವದಲ್ಲಿ ಪ್ರನಾಳ ಶಿಶು ಜನನದ ರೂವಾರಿಗಳಾದ ಡಾ.ಪ್ಯಾಟ್ರಿಕ್ ಸ್ಪೆಕ್ಟೋ ಮತ್ತು ರಾಬರ್ಟ್ ಎಡ್ವರ್ಡ್ ವಿಶ್ವ ಮಾನ್ಯತೆ ಪಡೆದ ವ್ಯೆದ್ಯರು. ಸ್ಪೆಸ್ಟೋರವರ ಪರಿಶ್ರಮದಿಂದ 1984ರಲ್ಲಿ ಜನಿಸಿದ ಈ ಪ್ರನಾಳ ಶಿಶು ಅದ್ಭುತ ಪ್ರತಿಭಾವಂತೆ. ಕೃತಿ ತನ್ನ ಹತ್ತನೆಯ ವಯಸ್ಸಿನಲ್ಲೇ ಇಂದ್ರಜಾಲ, ಭರತನಾಟ್ಯ, ಈಜು, ಸ್ಕೇಟಿಂಗ್( ಕಣ್ಣು ಕಟ್ಟಿಕೊಂಡೂ ಸ್ಕೇಟಿಂಗ್ ಮಾಡುವಳು) , ಚೆಸ್, ಶಾಸ್ತ್ರೀಯ ಸಂಗೀತ, ಕುದುರೆ ಸವಾರಿ, ಟೇಬಲ್ ಟೆನ್ನೀಸ್, ಬ್ಯಾಡ್ಮಿಂಟನ್, ತಬಲಾ, ಪಿಯಾನೋ, ರೋಲರ್ ಸ್ಕೇಟಿಂಗ್ ಮುಂತಾದ ಎಲ್ಲ ವಿಭಾಗಗಳಲ್ಲಿಯೂ ಪರಿಣಿತೆ. ಭಗವದ್ಗೀತೆಯ ಶ್ಲೋಕಗಳನ್ನು ಅಸ್ಖಲಿತವಾಗಿ ಹೇಳುವ ಕೃತಿ ಒಮ್ಮೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಪೂರ್ವ ಪ್ರತಿಭೆ ಪಡೆದಿದ್ದಾಳೆ. ಸತತವಾಗಿ ಹನ್ನೆರಡು ಗಂಟೆಗಳ ಕಾಲ ಕಾರ್ಯಕ್ರಮ ನೀಡಬಲ್ಲ ಸಾಮರ್ಥ್ಯ ಬೆಳೆಸಿಕೊಂಡಿದ್ದಾಳೆ. ಆದರೆ ವೀಕ್ಷಕರಿಗೆ ಅಷ್ಟು ತಾಳ್ಮೆ ಇಲ್ಲದ ಕಾರಣ ಮೂರುಗಂಟೆಗೆ ಸೀಮಿತಗೊಳಿಸಿಕೊಂಡು ವಿಶ್ವಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಇದುವರೆಗೂ ಸಹಸ್ರಾರು ಕಾರ್ಯಕ್ರಮವನ್ನು ನೀಡಿ ಜನಮನಸೂರೆಗೊಂಡಿದ್ದಾಳೆ. ತನ್ನ ಬದುಕಿಗೆ ಅಂಕುರವಿಟ್ಟ ಕೇಂಬ್ರಿಡ್ಜಿನ ಕ್ಲಿನಿಕ್ನಲ್ಲಿ ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ಜನಿಸಿದ ಸಾವಿರಾರು ಜನರೆದುರು ತನ್ನ ಪ್ರತಿಭೆಯನ್ನು ತೋರಿ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ. ಅದರಲ್ಲಿಯೂ ಇಂದ್ರಜಾಲ ವಿದ್ಯೆಯ ಬಗ್ಗೆ ಅತೀವ ಆಸಕ್ತಿಯನ್ನು ಬೆಳೆಸಿಕೊಂಡು ಬೀದಿ ಬದಿಯ ಜಾದು ಮಾಡುವವನಿಂದ ಹಿಡಿದು, ಪಿ.ಸಿ.ಸರ್ಕಾರ್, ಕೆ.ಲಾಲ್ ಮುಂತಾದವರಿಗೆ ಇಂದ್ರಜಾಲ ವಿದ್ಯೆಯನ್ನು ಕಲಿಸಿದ ಗುರು ಝಂಬಾಗೋ ಅವರಿಂದಲೂ ಸಹ ಜಾದೂ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಕೃತಿಯ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ಅನೇಕ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದ ಕೃತಿಗೆ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾದದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಆಕೆ ಉತ್ತರಿಸಿದ್ದು, "ಸಾಧನೆಗೆ ಬೇಕಾದ್ದು ಮನೋನಿರ್ಧಾರ. ಸಾಧಿಸಲೇಬೇಕೆಂಬ ಛಲ. ಆದರೂ ಜೀವನದಲ್ಲಿ ಸಾಧಿಸಿಸುವುದು ಇನ್ನೂ ಬಹಳಷ್ಟು ಇದೆ"
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

