ಪ್ರತಿಕ್ರಿಯೆ
ಕನ್ನಡಪ್ರಭದಲ್ಲಿ ಸೆ.25ರಂದು ಪ್ರಕಟವಾಗಿರುವ 'ಇಬ್ಬಂದಿತನಕ್ಕೆ ಇನ್ನೊಂದು ಸಾಕ್ಷ್ಯ ಇದಲ್ಲವೇ?' ಲೇಖನದಲ್ಲಿ ನಿಮ್ಮ ವರದಿಗಾರರಾದ ವಿನಾಯಕ ಭಟ್ಟ ಮೂರೂರು ಅವರು ನನ್ನನ್ನೂ ಉದ್ದೇಶಿಸಿ ಲೇಖನದ ಕೊನೆಯಲ್ಲಿ ಹೇಳಿರುವ ಮಾತುಗಳಿಗೆ ನೊಂದಿದ್ದೇನೆ.
"ಬಿಜೆಪಿ ಸರ್ಕಾರ ಇದ್ದಾಗ ವಿವೇಕಾನಂದರ 150ನೇ ಜನ್ಮದಿನಾಚರಣೆಯನ್ನು ಶಾಲೆಗಳಲ್ಲಿ ನಡೆಸುವಂತೆ ಸೂಚಿಸಿತ್ತು. ನೀವು ಮುಂದಾಳತ್ವ ವಹಿಸಿ ವಿರೋಧಿಸಿದ್ದು ನಿಜ ತಾನೆ? ಅದೇ ತಾವು ಬಸವನಗುಡಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ರಾಮಕೃಷ್ಣ ಆಶ್ರಮ ಬಳಿ ಇರುವ ವಿವೇಕಾನಂದ ಮೂರ್ತಿಗೆ ಹಾರ ಹಾಕುವ ಮೂಲಕ ಮತ ಯಾಚನೆ ಆರಂಭಿಸಿದಿರಿ. ಹೀಗೆಂದಾಕ್ಷಣ ಅದು ವೈಯಕ್ತಿಕ ಎಂದು ಬೊಬ್ಬೆ ಹೊಡೆಯುತ್ತೀರಿ" ಎಂದಿದ್ದಾರೆ. ಕನಿಷ್ಠ 5-6 ವರ್ಷಗಳಿಂದ ವಿವೇಕಾನಂದರ ಹಲವಾರು ಬರಹಗಳು-ಹೇಳಿಕೆಗಳನ್ನು ಸಭೆಗಳಲ್ಲಿ ಉಲ್ಲೇಖಿಸುತ್ತಲೇ ಬಂದಿದ್ದೇನೆ. ಅವರ 150ನೇ ಜನ್ಮ ದಿನದ ಆಚರಣೆಯನ್ನು ನಾನು ವಿರೋಧಿಸಿಯೇ ಇಲ್ಲ. ನಾನು ಸ್ಪಷ್ಟವಾಗಿ ವಿರೋಧಿಸಿದ್ದು ವಿವೇಕಾನಂದರು ಹಿಂದು ಧರ್ಮದ ಒಬ್ಬ 'ಸೇಲ್ಸ್ ಮನ್ ' ಎನ್ನುವ ಅರ್ಥ ಬರುವ ಪ್ರಾಥಮಿಕ ಶಿಕ್ಷಣ ಸಚಿವರ ಮಾತುಗಳನ್ನು.
"ಮನುಷ್ಯ ಮನುಷ್ಯರಲ್ಲಿ ಸಹೋದರ ಭಾವನೆಗಳಿಗೆ ಈ ಹಿಂದು, ಕ್ರಿಶ್ಚಿಯನ್, ಮುಸಲ್ಮಾನ ಎನ್ನುವ ಹೆಸರುಗಳು ದೊಡ್ಡ ಆತಂಕಗಳು. ಮೊದಲು ನಾವು ಅವುಗಳನ್ನು ಮುರಿಯಲು ಪ್ರಯತ್ನಿಸಬೇಕು. ಅವು ತವು ತಮ್ಮಲ್ಲಿದ್ದ ಒಳ್ಳೆಯ ಶಕ್ತಿಗಳನ್ನು ಕಳೆದುಕೊಂಡು ಈಗ ಕೇವಲ ನಾಶಕಾರಕ ಶಕ್ತಿಯನ್ನು ಮಾತ್ರ ಉಳಿಸಿಕೊಂಡಿವೆ. ನಾನು ಮಹಮ್ಮದೀಯರ ಮಸೀದಿಗೆ ಹೋಗುತ್ತೇನೆ, ಕ್ರೈಸ್ತರ ಚರ್ಚಿನಲ್ಲಿ ಶಿಲುಬೆಗೆ ಕೈ ಮುಗಿಯುತ್ತೇನೆ, ಬೌದ್ಧರ ವಿಹಾರದಲ್ಲಿ ಬುದ್ಧನಿಗೆ ಶರಣಾಗುತ್ತೇನೆ." ಎನ್ನುವ ವಿವೇಕಾನಂದರ ಹೃದಯ ವೈಶಾಲ್ಯತೆಯನ್ನು ಪ್ರಸ್ತುತ ಪಡಿಸುವ ವಿಚಾರಗಳನ್ನು ಅಂದಿನ ಸಚಿವರು ಒಂದೇ ಒಂದು ದಿನ ಬಹಿರಂಗಪಡಿಸಲಿಲ್ಲ.
ದಕ್ಷಿಣ ಕನ್ನಡದ ಸೂಳ್ಯದಲ್ಲಿ ನನ್ನೊಡನೆ ವೇದಿಕೆಯಲ್ಲಿದ್ದ ಆರ್ಎಸ್ಎಸ್ ಸದಸ್ಯರೊಬ್ಬರು ಈ ಎಲ್ಲಾ ಮಾತುಗಳನ್ನು ಉಲ್ಲೇಖಿಸಿ ಸುಮಾರು 3 ವರ್ಷಗಳೇ ಕಳೆದಿವೆ. ಆಯ್ದ, ಹೆಕ್ಕಿದ ಹೇಳಿಕೆಗಳಿಗಷ್ಟೇ ನನ್ನ ಆಕ್ಷೇಪಣೆ ಇತ್ತು. ನಾನು ಬೊಬ್ಬೆಯಂತೂ ಹೊಡೆದಿರಲಿಲ್ಲ ವಿನಾಯಕ್ರವರೇ..
- ಬಿ.ಕೆ. ಚಂದ್ರಶೇಖರ್, ಮಾಜಿ ಸಚಿವರು
ಜಾತಿ ಸಮಾವೇಶ ಸರಿಯೇ?
ಇತ್ತೀಚೆಗೆ ಮುಖ್ಯಮಂತ್ರಿಗಳು ಜಾತಿ ಸಮಾವೇಶ ನಡೆಸಿ, ನೀವು ಹಕ್ಕುಗಳನ್ನು ಕೇಳಿ ಎಂದಿದ್ದಾರೆ. ಜಾತಿ-ಜಾತಿಗಳ ನಡುವೆ ಒಗ್ಗಟ್ಟುಗಳಿದ್ದರೆ ಹಕ್ಕುಗಳ್ನು ಕೇಳಬಹುದು. ಅದನ್ನು ಒಪ್ಪಿಕೊಳ್ಳುತ್ತೇನೆ.
ಆದರೆ, ರಾಜ್ಯದ ಪ್ರತಿಯೊಬ್ಬ ನಾಗರೀಕನಿಗೂ ಸಮಾಜದಲ್ಲಿ ಮುಂದೆ ಬರಲು ಅವಕಾಶಗಳಿವೆ. ಸಾಮಾಜಿಕವಾಗಿ ಮುಂದೆ ಬರಲು ಯಾವುದೇ ಸಮಾವೇಶಗಳು ಬೇಕಿಲ್ಲ.
ಈಗಾಗಲೇ ಜಾತಿ-ರಾಜಕೀಯದಿಂದ ವಾಸ್ತವ ಪರಿಸ್ಥಿತಿ ರಚ್ಚೆ ಹಿಡಿದಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಈ ರೀತಿಯಾಗಿ ಹೇಳಿಕೆ ನೀಡುವುದು ಸರಿಯೇ? ಆಡಳಿತಾತ್ಮಕ ಶಕ್ತಿಗಳ ಸಮಾಜದಲ್ಲಿ ಸರ್ವ ಜನಾಂಗವನ್ನು ಬೆಳೆಸುವ ಪ್ರಕ್ರಿಯೆಲ್ಲಿ ತೊಡಗಬೇಕೇ ವಿನಃ ಜಾತಿ ವೈಷಮ್ಯಕ್ಕೆ ಕಾರಣವಾಗಬಾರದು. ಸರ್ಕಾರ ತನ್ನ ಔಚಿತ್ಯತೆಯನ್ನು ಗಮನಿಸಿಕೊಳ್ಳಬೇಕು.
- ಜನಾರ್ದನ ಸೂರ್ಯ, ಉಜಿರೆ. (ದ.ಕ.)
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

