ಎಣ್ಣೆ

Updated on: 

ಎಣ್ಣೆ
= ವಿಮಾ ಕಂಪೆನಿ ಏಜೆಂಟರು ಕೈಯಲ್ಲಿ ಹಿಡಿದಿರುವ ಪರಮೌಷಧ
= ಇದು ಬಾಟಲಿಯಲ್ಲೂ ಬರುತ್ತದೆ, ಪ್ಯಾಕೆಟ್‌ನಲ್ಲೂ ಸಿಗುತ್ತದೆ
= ಅಡಿಗೆಗೆ ಬಳಸುವ ಎಣ್ಣೆ ದಿನಗಳೆದಂತೆ ಕೆಡುತ್ತದೆ
= ಇನ್ನೊಂದು ರೀತಿಯ ಎಣ್ಣೆ ದಿನಗಳೆದಂತೆ ತಾಜಾ ಆಗುತ್ತದೆ
= ಎಣ್ಣೆ ಯಾವುದಾದರೇನು ಮತ್ತೇರಿದ್ದೇ ಗೊತ್ತು
= ವಿಜಯ್ ಮಲ್ಯರ ನವೋತ್ಸಾಹ ಚಿಲುಮೆಯ ಮೂಲ ಸೆಲೆ
= ಮದ ಮತ್ತು ಉನ್ಮಾದಕ್ಕೆ ಕಾರಣವಾದ ಮದ್ಯ
= ಒಮ್ಮೆರುಚಿ ಹತ್ತಿದರೆ ಇದರ ಬಳಕೆಗೆ ಎಣೆ ಇಲ್ಲ
= ಶ್ರಮಿಕರ ದುಡಿತವನ್ನೆಲ್ಲ ಕಸಿಯುವ ಮಾರಕ ಶತ್ರು
= ಮೂಕಂ ಕರೋತಿ ವಾಚಾಲಮ್
= ಸತ್ಯವನ್ನು ಬಾಯಿ ಬಿಡಿಸುವ ತಾಯಿ
= ಕುಡಿದವನಿಗೆ ಸಾಂಸಾರಿಕ ತಾಪತ್ರಯಗಳನ್ನು ತಾತ್ಕಾಲಿಕವಾಗಿ ಶಮನ ಮಾಡುವ ಪೇನ್ ಕಿಲ್ಲರ್
= ನಶೆಯೇರಿಸಿ ನಾಶ ಮಾಡುವ ವಿದ್ವಂಸಕ
= ಬ್ರ್ಯಾಂಡ್ ಮತ್ತು ಬಾಟಲ್ ಯಾವುದಾದರೇನು, ಒಳಗಿನ ಎಣ್ಣೆ ಒಂದೇ
= ಅಧರಕ್ಕೂ ಕಹಿ ಉದರಕ್ಕೂ ಕಹಿ
= ಚುನಾವಣೆಯ ಸಮಯದಲ್ಲಿ ಹಂಚಲ್ಪಡುವ ತೀರ್ಥ

ವಿಶ್ವನಾಥ ಸುಂಕಸಾಳ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com