ದಮ ಮತ್ತು ಶಮ ಇಲ್ಲದ ಮನಸ್ಸಿಗೆ ಒದಗುವ ಸ್ಥಿತಿ
ಹದ ತಪ್ಪಿದರೂ ಒದಗುವ ಮನಃಸ್ಥಿತಿ
ಆಮೋದ ಪ್ರಮೋದಗಳಿಗೆಲ್ಲ ಸೊಕ್ಕಿನ ಕದ ಜಡಿದು ಏರಿಸಿಕೊಂಡ Sickಕ್ಕು
ಪ್ರಮಾದದ ಮೊದಲ ಹೆಜ್ಜೆ
ಉನ್ಮಾದಪ್ರದ ಪದ
ಮೇಧಾ ಶಕ್ತಿ ಸೊರಗಿ ಬೋಧ ಕಳೆದುಕೊಂಡಾಗ ಏರುವ ಅವಿವೇಕ
ಮದನನ ಪೌರುಷದ ಸೂಚಕ
ಮದ್ದಿಲ್ಲದ ರೋಗಗಳಲ್ಲೊಂದು ಈ ಮದ
ಮದಿರೆ ಹೀರಿದಾಗ ಉತ್ಪತ್ತಿಯಾಗುವ ಮದರಸ
ಮಾತೆಲ್ಲ ವಾದವಾಗಲು ಇದೇ ಕಾರಣ
ಹೂಂಕಾರಕ್ಕೆ ಕಾರಣವಾದ ಅಹಂಕಾರ
ನಾನು ಮಾತ್ರ ಉತ್ತಮ ಪುರುಷ ಎಂಬ ಹುಸಿ ಪೌರುಷ
ನಮ್ಮನ್ನೇ ಕಚ್ಚುವ ನಮ್ಮೊಳಗಿನ ಸರ್ಪ ಈ ದರ್ಪ
ವಾದದ ಸ್ವಾದವನ್ನು ಹಾಳುಗೆಡವುವ ಅಹಮ್
ತೆರೆಯದಿರೆ ಮನದ ಕದ, ಏರುವುದು ಮನದಿ ಮದ
ವಿಶ್ವನಾಥ ಸುಂಕಸಾಳ