ಸಂಪಾದಕೀಯ

ಬೆಂಗಳೂರಿನ ಭ್ರಷ್ಟಾಚಾರ

Published On :

ಬೆಂಗಳೂರು ಮಹಾನಗರದ ನಾಗರಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದಕ್ಕೆಂದೇ ರೂಪಗೊಂಡಿರುವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ತಾಂಡವ ನಡೆದಿರುವುದು ಹೊಸದಾದ ವಿಚಾರವೇನೂ ಅಲ್ಲ.
ಅದರ ವಿರುದ್ಧ ಹಲವಾರು ಜನಪರ ಸಂಘಟನೆಗಳು ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸಿರುವುದೂ ನಿಜ. ಆದರೆ ಪರಿಹಾರ ಸಿಕ್ಕಿಲ್ಲ. ಬೆಂಗಳೂರು ದೇಶದಲ್ಲೇ ಅತಿ ಭ್ರಷ್ಟ ನಗರ ಎನ್ನುವ ಅಪಖ್ಯಾತಿಗೆ ಒಳಗಾಗಿರುವಂತಿದೆ.
ಈ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ 750 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಒಕ್ಕೂಟ ನಡೆಸಲಿರುವ ಒಂದು ಸಹಿ ಸಂಗ್ರಹ ಅಭಿಯಾನ ಭಾನುವಾರ ಆರಂಭವಾಗಿದೆ. ರಾಜ್ಯ ಸಭೆ ಸದಸ್ಯ ರಾಜೀವ ಚಂದ್ರಶೇಖರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹಾಗೂ ಇತರ ಪ್ರಮುಖರು ಇಂತಹ ಅಭಿಯಾನದ ನಾಯಕತ್ವ ವಹಿಸಲು ಮುಂದೆ ಬಂದಿರುವುದು ಸ್ವಾಗತಾರ್ಹ.
ಈ ಅಭಿಯಾನದ ಮೂಲ ಮಂತ್ರ ನಗರದ ಎಲ್ಲ ಯೋಜನೆಗಳಲ್ಲೂ ಜನಪ್ರತಿನಿಧಿಗಳಿಗೆ ಪ್ರಾತಿನಿಧ್ಯವನ್ನು ಒದಗಿಸುವುದು ಹಾಗೂ ಪಟ್ಟಭದ್ರ ಆಸಕ್ತ ಹಿತಗಳ ವಿರುದ್ಧ ಹೋರಾಡುವುದು. ಸಾಧ್ಯವಿರುವಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸಹಿ ಸಂಗ್ರಹಿಸಿ, ಅದನ್ನು ಮನವಿ ಪತ್ರಕ್ಕೆ ಜೋಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಲಾಗುವುದು.
ಮುಖ್ಯಮಂತ್ರಿಗಳು ಶೀಘ್ರದಲ್ಲೇ ಸೂಕ್ತ ಕಾರ್ಯಕ್ರಮ ಕೈಗೊಂಡರೆ ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕೆ ಹಿಂಜರಿಯಬಾರದು. ಅವರು ಮನವಿಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ, ಜನರ ಪರವಾಗಿ ನೇರ ಹೋರಾಟವನ್ನೇ ಆರಂಭಿಸುವ ಚಿಂತನೆಯೂ ಪ್ರಕಟವಾಗಿದೆ. ಇದೊಂದು ಸ್ವಾಹತಾರ್ಹ ಗಾಂಧಿ ಮಾರ್ಗದ ಅಭಿಯಾನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.