ಸಂಪಾದಕೀಯ

ಮಾಧ್ಯಮ ಹಾಗೂ ರಾಜಕಾರಣಿ

Published On :

ಸೊಲ್ಲಾಪುರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರು ಟಿ.ವಿ. ವಾಹಿನಿಗಳನ್ನು ಅಪ್ಪಚ್ಚಿ ಮಾಡಬೇಕೆಂದು ಹೇಳಿದರೆಂದು ಒಬ್ಬ ಪತ್ರಕರ್ತನ ಮಾತನ್ನು ಆಧರಿಸಿ, ರಾಷ್ಟ್ರೀಯ ಸುದ್ದಿ ವಾಹಿನಿಗಳು, ಪ್ರತಿಷ್ಠಿತ ಪತ್ರಿಕೆಗಳು ಪ್ರಕಟಿಸಿವೆ.
ಆ ಮಾತನ್ನು ಶಿಂಧೆ ಅವರು ಅನಂತರ ಅಲ್ಲಗಳೆದರೂ, ಅದರಿಂದ ಪರಿಸ್ಥಿತಿಯ ಬದಲಾವಣೆ ಆಗುವುದಿಲ್ಲ. ಶಿಂಧೆ ಅವರು ತಮ್ಮ ತವರೂರಿನಲ್ಲಿ ಮಾಧ್ಯಗಳನ್ನು ಖಂಡಿಸಿರುವ ಉದಾಹರಣೆಗಳೂ ಇವೆ.
ಇದೇ ಸಮಯದಲ್ಲೇ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ, ಮಾಧ್ಯಮದ ಮೂಲಕ ಭ್ರಷ್ಟರು ಲಂಚ ಕೊಟ್ಟು ತಮಗೆ ಬೇಕಾದ ಅಭಿಪ್ರಾಯಗಳನ್ನು, ಸಂಗತಿಗಳನ್ನು ಪ್ರಕಟಿಸಿಕೊಳ್ಳಬಹುದೆಂದು ಹೇಳಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ "ಮಾಧ್ಯಮ" ಸಾರಾಸಗಟು ಕಟಕಟೆಯಲ್ಲಿ ನಿಂತಿರುವಂತೆ ಆಗಿದೆ. ದೆಹಲಿಯ ಎಡಿಟರ್ಸ್ ಗಿಲ್ಡ್ ಸಂಸ್ಥೆ ಶಿಂಧೆ, ಕೇಜ್ರಿವಾಲ್ ಅವರ ಹೇಳಿಕೆಗಳನ್ನು ಖಂಡಿಸಿರುವುದು ಸಹಜ. ಆದರೆ ಈಗಿನ ವಾತಾವರಣದಲ್ಲಿ ಮಾಧ್ಯಮ ನಿಂದನೆಯ ಪ್ರಕ್ರಿಯೆ ಮುಂದುವರಿಯುವ ಸಂಭವವಿದೆ.
ಪ್ರಮುಖವಾಗಿ, ರಾಜಕೀಯ ಪಕ್ಷಗಳ ಆಕ್ಷೇಪವಿರುವುದು ಚುನಾವಣೆ ಪೂರ್ವ ಸಮೀಕ್ಷೆಗಳ ಫಲಿತಾಂಶದ ವರದಿಗಳು. ಅದರಲ್ಲೂ ವರದಿಗಿಂತ ಹೆಚ್ಚಾಗಿ ಶೀರ್ಷಿಕೆಗಳ ಮೇಲೇ ಹೆಚ್ಚು ಆಕ್ರೋಶ ಪ್ರಕಟವಾಗುತ್ತಿರುವಂತಿದೆ.
ಮಾಧ್ಯಮ- ರಾಜಕಾರಣಿ ಒಂದನ್ನು ಬಿಟ್ಟು ಇನ್ನೊಂದು ಇರುವುದು ಸಾಧ್ಯವಿಲ್ಲ. ಇಲ್ಲಿ ಸಂಘರ್ಷ ಯಾವುದೇ ಕಾರಣಕ್ಕೆ ನಡೆದರೂ ಅದು ಸಾತ್ವಿಕ ಜನತಾಂತ್ರಿಕ ಮಾರ್ಗದಲ್ಲೇ ನಡೆಯಬೇಕು. ಇತರರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಸಹನೆಯ ಧರ್ಮಕ್ಕೆ ಎರಡೂ ವಲಯಗಳು ಬದ್ಧವಾಗಬೇಕು, ಜಗಳ ಅನಿವಾರ್ಯವಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.