ಸಂಪಾದಕೀಯ

ಸುಗ್ರೀವಾಜ್ಞೆ ಕಸರತ್ತು ಬೇಡ

Published On :

ಸಂಸತ್ತಿನ ಕಳೆದ ಅಧಿವೇಶನದ ಕೊನೆಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಆರು ವಿಧೇಯಕಗಳಿಗೆ ಒಪ್ಪಿಗೆಯನ್ನು ಪಡೆದುಕೊಳ್ಳುವ ಕಾಂಗ್ರೆಸ್ಸಿನ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಮಾಹಿತಿದಾರನಿಗೆ ರಕ್ಷಣೆಯನ್ನು ಒದಗಿಸುವ ಒಂದು ವಿಧೇಯಕಕ್ಕೆ ಮಾತ್ರ ಸಂಸತ್ತಿನ ಒಪ್ಪಿಗೆ ದೊರೆಯಿತು. ಉಳಿದ ಐದು ವಿಧೇಯಕಗಳನ್ನು ಮಂಡಿಸುವುದಕ್ಕೆ ಉಳಿದ ಪಕ್ಷಗಳಿಂದ ಸಹಮತ ದೊರೆಯಲಿಲ್ಲ.
ಈ ವಿಧೇಯಕಗಳು ರಾಹುಲ್ ಗಾಂಧಿಯವರ ಕನಸಿನ ವಿಧೇಯಕಗಳಾಗಿದ್ದವು ಎಂಬುದು ಕಾಂಗ್ರೆಸ್‌ನ ಪ್ರಚಾರವಾಗಿದೆ. ಇದಕ್ಕೆ ಪ್ರಮುಖ ಪ್ರತಿಪಕ್ಷ ಬಿಜೆಪಿಯು ಬೆಂಬಲವನ್ನು ಕೊಡಲಿಲ್ಲ ಎಂಬ ಆರೋಪ ಆ ಪಕ್ಷದ್ದು. ಈ ಕಾರಣಕ್ಕಾಗಿಯೇ ಅವುಗಳನ್ನು ಜಾರಿಗೆ ತರುವುದಕ್ಕೆ ಸುಗ್ರೀವಾಜ್ಞೆಯ ಮೊರೆಹೋಗುವ ಮಾತನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಪಕ್ಷವೇ. ಅದರ ಆಡಳಿತದಲ್ಲಿಯೇ ಹಲವು ಹಗರಣಗಳು ನಡೆದವು. ಆಗ ಸುಮ್ಮನಿದ್ದ ರಾಹುಲ್ ಗಾಂಧಿಯವರು ಈಗ ಚುನಾವಣೆ ಸಮೀಪಿಸುತ್ತಿರುವಾಗ ಭ್ರಷ್ಟಾಚಾರ ತಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ಅವರು ತಮ್ಮ ಪಕ್ಷದ ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂಬುದು ಬಿಜೆಪಿ ನಾಯಕರ ಆರೋಪ. ಇದರಲ್ಲಿ ಸತ್ಯಾಂಶ ಇಲ್ಲದೇ ಇಲ್ಲ.
ಒಂದು ವೇಳೆ ಯುಪಿಎ ಸರ್ಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿದರೂ ಮುಂದೆ ಬರುವ ಸರ್ಕಾರ ಅದರಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಸುಗ್ರೀವಾಜ್ಞೆಯ ಮಾರ್ಗವನ್ನು ಬಿಟ್ಟು ಮುಂದಿನ ಸರ್ಕಾರಕ್ಕೇ ಈ ಸಂಬಂಧದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕೆ ಬಿಡುವುದು ಸರಿಯಾದ ಕ್ರಮವಾಗುತ್ತದೆ. ಯಾವುದೇ ಜನೋಪಯೋಗಿ ಕೆಲಸ ಇರಬಹುದು, ಅದು ಚುನಾವಣೆಯಲ್ಲಿ ಯಾರದೋ ಪ್ರಚಾರಕ್ಕೆ ವಸ್ತುವಾಗುತ್ತದೆ ಎನ್ನುವುದಾದರೆ ಅದರ ಮೂಲ ಉದ್ದೇಶದ ಬಗ್ಗೆಯೇ ಅನುಮಾನ ಮೂಡುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.