ಏಕಾಂತ
ಕಾಂತೆ ದೂರ ತೆರಳಿದಾಗ ಒದಗುವ ಸ್ಥಿತಿ
ಅಂಟಿಕೊಂಡೇ ಇರುತ್ತಿದ್ದವರು ಅಗಲಿದಾಗ ಉಂಟಾಗುವ ಒಬ್ಬಂಟಿತನ
ಲೋನ್ ಬೇಕು ಎನಿಸಿದಾಗ ಯಾರೂ ಕೊಡದೇ ಕೈ ಎತ್ತಿದಾಗ ಅನಿಸುವ ಲೋನ್ಲಿನೆಸ್
ರಾಜ ತನ್ನ ಮಂತ್ರಿಗಳೊಂದಿಗೆ ಮಂತ್ರಾಲೋಚನೆ ನಡೆಸುವ ಜಾಗ
ಕಾಂತ- ಕಾಂತೆಯ ಮನವೊಲಿಸಬಹುದಾದ ಪ್ರಾಂತ
ಶಾಸ್ತ್ರಗಳಲ್ಲಿ ನಿಶ್ಚಯ ಎಂಬ ಅರ್ಥದಲ್ಲಿ ಬಳಸಲ್ಪಟ್ಟಿರುವ ಶಬ್ದ
ರಹಸ್ಯಗಳನ್ನೆಲ್ಲ ಹಂಚಿಕೊಳ್ಳಲು ಇರುವ ರಹ ದಾರಿ
ಕಾಂತೆಯ ಬಳಿ ಏಕೆ ಅಂತ ಕೇಳಲು ಏಕಾಂತವೇ ಸೂಕ್ತ
ಏಕಾಂತದಲ್ಲಿ ಎಸಗಿದ ತಪ್ಪು ಪ್ರಸವದಲ್ಲಿ ಕೊನೆಯಾಗುತ್ತದೆ
ಏಕಾಂತ ಒಳ್ಳೆಯದು. ಹಾಗಂತ ಮದುವೆಯಾಗದೇ ಇರಲಾಗುವುದಿಲ್ಲ
ಅಂತ್ಯದಲ್ಲಿ 'ಏಕ' ಉಳ್ಳ ಅನೇಕ ಎಂಬ ಶಬ್ದವೂ ಕೂಡ ಏಕಾಂತ ಶಬ್ದವೇ
ಗುಹೆ ಶಬ್ದದ ಸಮಾನಾರ್ಥಕ, ಗೃಹ ಶಬ್ದದ ವಿರುದ್ಧಾರ್ಥಕ
-ವಿಶ್ವನಾಥ ಸುಂಕಸಾಳ
vishwasunkasal@yahoo.com