= ಪ್ರಯತ್ನಕ್ಕಿಂತ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರಕ್ಕೇ ಆದ್ಯತೆ ಕೊಡುವವನಿಗೆ ಯಶಸ್ಸು ಸಿಗುವ ಸಾಧ್ಯತೆಗಳು ಕಡಿಮೆ
'ಏಕ್ ಮಾರ್ ದೋ ತುಕಡಾ' ಎಂಬಂತೆ 'ಖಂಡತುಂಡ'ವಾಗಿ ಹೇಳಲಾಗದ ಸಂದರ್ಭ
= ಖಾಚಿತ್ಯವಿಲ್ಲದಿದ್ದರೂ ಔಚಿತ್ಯಕ್ಕೆ ಮಣೆ ಹಾಕಿದಾಗ ದೊರೆಯುವ ಅವಕಾಶ
= ಸಾಧ್ಯತೆಗಳ 'ಬಾಗಿಲು ಮುಚ್ಚಿದೆ' ಎನಿಸಿದಾಗಲೂ 'ಕಿಟಕಿ ತೆರೆದಿರಬಹುದಾ' ಎಂದು ಆಶಾವಾದಿಯ ಮನಸ್ಸು ಯೋಚಿಸುವ ಸಾಧ್ಯತೆಗಳೇ ಹೆಚ್ಚು
ಕೊನೆಯ ಎಸೆತಕ್ಕೆ ಆರು ರನ್ನು ಬೇಕಿರುವಾಗ ಮನಸ್ಸು ಯೋಚಿಸುವುದು ಇದನ್ನೇ
= ಸಿಬಲ್ ಅವರಿಂದ ಮಾಡಲ್ಪಡುವ ಸಾಧ್ಯತೆ ಇಲ್ಲದಿದ್ದರೆ ಅದನ್ನು 'ಇಂಪಾಸಿಬಲ್' ಎನ್ನಬಹುದು
= ಸಾಧ್ಯತೆಗಳು ಎಲ್ಲ ಕಡೆ ಇರುತ್ತವೆ ಆದರೆ ನಾವು ಅದನ್ನು ಗಮನಿಸಿರಬಹುದಾದ ಸಾಧ್ಯತೆಯೇ ಕಡಿಮೆ
= ಸಾಧ್ಯತೆಗಳು ಮೋಡಗಳಂತೆ. ಕೆಲವೊಮ್ಮೆ ದಟ್ಟವಾಗುತ್ತವೆ. ಕೆಲವೊಮ್ಮೆ ಚದುರುತ್ತವೆ. ಕೆಲವೇ ಕೆಲವು ನೀರಾಗಿ ಉದುರುತ್ತವೆ
= ಸಾಧ್ಯತೆಗಳು ತೆರೆದುಕೊಂಡಾಗ ನಾವೂ ಅದಕ್ಕೆ ತೆರೆದುಕೊಂಡರೆ ಯಶಸ್ಸು ದೊರೆಯುತ್ತದೆ
= ಸದ್ಯದಲ್ಲೇ ಆಗುತ್ತೋ ಇಲ್ಲವೋ ಎಂಬ ಸಂಶಯವಿದ್ದಾಗ ಸಂದೇಹ ದ್ಯೋತಕವಾಗಿ ಉಪಯೋಗಿಸಲ್ಪಡುವಂಥದ್ದು
-ವಿಶ್ವನಾಥ ಸುಂಕಸಾಳ
ಢ್ಝಝಢಿಛಡ್ಡಟ್ಞಿಛಡಛಟಅಣಝ್ಟ್ಟ.್ಛ್ಟಟ