ಹೊಟ್ಟೆಬಾಕ, ತಿಂಡಿಪೋತ
ಹಕಾರದಿಂದ ಪ್ರಾರಂಭವಾಗುವ ಹಾಹಾಕಾರದ ಬೀಜಮಂತ್ರ
ದುಡ್ಡು ಇದನ್ನು ನೀಗಿಸುವುದಿಲ್ಲ. ಫುಡ್ಡು ಮಾತ್ರದಿಂದ ಅದು ಸಾಧ್ಯ
ಇದು ಬಡವ ಬಲ್ಲಿದ ಇತ್ಯಾದಿ ಯಾವ ಭೇದವನ್ನೂ ಮಾಡದ ನಿಜವಾದ ಜಾತ್ಯತೀತ, ಸಮತಾವಾದಿ ಮತ್ತು ಸೆಕ್ಯುಲರ್
ಹೆಂಡತಿ ಮಾಡಿದ ಅಡಿಗೆ ರುಚಿಸಲು ಕಾರಣವಾದ ಅಂಶಗಳಲ್ಲಿ ಒಂದು
ಕಳ್ಳರನ್ನೂ, ಸುಳ್ಳರನ್ನೂ ಮೋಸಗಾರರನ್ನೂ ಹುಟ್ಟುಹಾಕೋದು ಇದೇ
ಬಡವನಿಗೆ ದೇವರು ಕೊಡುವ ಜೀವಾವಧಿ ಶಿಕ್ಷೆ
ಜೀವಿಗಳ ಹಸಿವನ್ನು ಕ್ಷಣದ ಮಟ್ಟಿಗಾದರೂ ತಣಿಸಬಹುದು. ಆದರೆ ಹಸಿವಿನ ಹಸಿವಿಗೆ ಪರಿಹಾರವಿಲ್ಲ
ತೃಣವನ್ನಾದರೂ ತಿನ್ನಬೇಕೆನಿಸುವಷ್ಟು ನಿತ್ರಾಣಗೊಳಿಸುವಂಥದ್ದು
ಸಾವಯವ ಸುರಿಹೊಂಡ
ಹಸಿವು ಕೆಲವರನ್ನು ಆರಾಮವಾಗಿ ಮಲಗಲು ಬಿಡುವುದಿಲ್ಲ. ಇನ್ನು ಕೆಲವರನ್ನು ಮಲಗಿದ್ದಲ್ಲಿಂದ ಏಳಲು ಬಿಡುವುದಿಲ್ಲ.
ಇರುವುದೆಲ್ಲವ ಕೊಟ್ಟಾದರೂ ಹೊಟ್ಟೆಗೆ ಹಿಟ್ಟು ತುಂಬಿಸಿಕೊಳ್ಳುವಂತೆ ಮಾಡುವುದೇ ಹಸಿವು
-ವಿಶ್ವನಾಥ ಸುಂಕಸಾಳ
vishwasunkasal@yahoo.com