ಅತ್ಯಾಚಾರ

Updated on

ಅತ್ಯಾಚಾರ
    ಇದು ಗಂಡಸುತನದ ಮಾನ ಭಂಗ
    ಸ್ವನಿಯಂತ್ರಣ ಕಲಿಸಬೇಕಿದ್ದ ಶಿಕ್ಷಣ, ಯಂತ್ರಗಳನ್ನು ತಯಾರಿಸುವ ಮಾಧ್ಯಮವಾಗಿರುವ ಪರಿಣಾಮ
    ಮಾನವೀಯತೆ, ಬುದ್ಧಿ, ವಿವೇಕಗಳೆಲ್ಲ ಕೋಮಾ ಸ್ಥಿತಿಯಲ್ಲಿರುವವನ ಕಾಮದಾಟ
    ಗಂಡಸುತನವೆಂಬ ಸುಳ್ಳು ಪೌರುಷದ ಅಸ್ಥಾನ ಪ್ರಯೋಗ
    ಬಲವಂತರೆಂದುಕೊಂಡ ಕಾಮಾಂಧರೊಳಗಿನ ಅಮಾನುಷತ್ವದ ಸಂಸೂಚಕ
    ಭೋಗಪ್ರಧಾನ ಸಂಸ್ಕೃತಿ ಸಮಾಜದಲ್ಲಿ ಹೆಚ್ಚುತ್ತಿರುವುದರ ಪ್ರಧಾನ ಲಕ್ಷಣ
    ಮನೋರಂಜನೆಯ ಹೆಸರಲ್ಲಿ ವಿಜೃಂಭಿಸಿ ತೋರಿಸುವ ಸಿನಿಮಾಗಳು ಹಾಗೂ ಸೆನ್ಸಾರ್ ಇಲ್ಲದ ಅಂತರ್ಜಾಲಗಳ ನೇರ ಪರಿಣಾಮ
    ನಾಗರಿಕ ಸಮಾಜದ ಅನಾಗರಿಕ ವರ್ತನೆ
    ದುರ್ಬಲರ ಮೇಲಿನ ಸಬಲರ ಶೋಷಣೆಗಳೆಲ್ಲ ಅತ್ಯಾಚಾರವೇ
    ಜನಹಿತ ಕಾಯಬೇಕಾದವರು ಒರಗಿ ನಿದ್ರಿಸುತ್ತಿರುವುದರ ಫಲಿತ
    ಸ್ವಾತಂತ್ರ್ಯವನ್ನು ಸ್ವೇಚ್ಛೆಗೆ ಬಳಸಿಕೊಳ್ಳುವ ಗಂಡು ಮತ್ತು ಹೆಣ್ಣು ಇವರಿಬ್ಬರೂ ಹೊಣೆಗಾರರು ಇದಕ್ಕೆ
    ಅನಾಚಾರವೊಂದೇ ಅಲ್ಲ, ಅತಿಯಾದರೆ ಆಚಾರವೂ ಅತ್ಯಾಚಾರವೇ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com