ಸಾರ್ವಜನಿಕ ಸ್ಥಳ
ಧೂಮಪಾನ, ಅಧರಪಾನಗಳನ್ನೆಲ್ಲ ಮಾಡಬಾರದ ಜಾಗ
ಆದರೆ ಇಲ್ಲಿ ಪಾನ್ ಹಾಕಬಹುದು. ಅಷ್ಟೇ ಅಲ್ಲ, ಉಗಿಯಬಹುದು
ಮದ್ಯಪಾನ ಕೂಡ ಮಾಡಬಹುದು. ಆದರೆ ಅಶ್ಲೀಲವಾದ ಪನ್ ಮಾಡಬಾರದು ಅಷ್ಟೇ
ಮೆತ್ತಗಿನ ಧ್ವನಿಯಲ್ಲಿ ಗಾನ ಕೂಡ ಮಾಡಬಹುದು
ಹುಡುಗಿಯರನ್ನು ಚುಡಾಯಿಸುವವರಿಗೆ ಸುರಕ್ಷಿತವಲ್ಲದ ಸ್ಥಳ
ಭಿಕ್ಷುಕರಿಗೆ, ಪಿಕ್ ಪಾಕೇಟ್ ಮಾಡುವವರಿಗೆ ಇದು ಕಾರ್ಯಕ್ಷೇತ್ರ
ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್ ಮೊದಲಾದ ಯಾರು ಬೇಕಾದರೂ ತಂಗಬಹುದಾದ ತಂಗುದಾಣಗಳು
ನೀವಿಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು, ಆದರೆ ಏನೇನೆಲ್ಲ ಮಾಡುವಂತಿಲ್ಲ
ಸರ್ವದಾ ಸಾರ್ವಜನಿಕರಿಂದ ತುಂಬಿ ತುಳುಕುವ ಕೊಳಕು ಜಾಗ
ಪೊಲೀಸರ ಹಫ್ತಾ ವಸೂಲಿ ನಡೆಯುವ ಕ್ಷೇತ್ರ
ಇಲ್ಲಿ ಎಲ್ಲರ ಹಕ್ಕು ಇದೆ. ಹಾಗಂತ ಸೊಕ್ಕು ಮಾಡುವಂತಿಲ್ಲ
ನಿರುದ್ಯೋಗಿಗಳಿಗೆ ಪ್ರಪಂಚ ವೀಕ್ಷಣಾ ಕಾರ್ಯವನ್ನು ಒದಗಿಸುವ ಸ್ಥಳ
ಸಾರ್ವಕಾಲಿಕ ಸತ್ಯಗಳೆಲ್ಲ ಗೋಚರವಾಗುವುದು ಇಂಥ ಕಡೆಗಳಲ್ಲೇ
ಬೀದಿ ಕಾಮಣ್ಣರ ವಾಸಸ್ಥಳ
'ಇಲ್ಲಿ ಯಾರೂ ಮೂತ್ರ ವಿಸರ್ಜನೆ ಮಾಡಬಾರದು'
-ವಿಶ್ವನಾಥ ಸುಂಕಸಾಳ
vishwasunkasal@yahoo.com