ಮೋದಿ ಶಬ್ದದ ಸಮಾನಾರ್ಥಕ
ಮನಮೋಹನ್ ಪದದ ವಿರುದ್ಧಾರ್ಥಕ
ದಿಗ್ವಿಜಯರಿಗೆ ದಿಕ್ಕು ದಿಕ್ಕಿನಲ್ಲಿ ಧಿಕ್ಕಾರ ಮೊಳಗುವಂತೆ ಮಾಡಿದ್ದು
ಭಾವದ ಪ್ರಕಟಣೆಗೆ ನಾವು ಆತುಕೊಳ್ಳುವ ಮಾಧ್ಯಮ
ಮಾತು ಆಡಿದರೆ ಹೋಯಿತು, ಮುತ್ತು ಕೊಟ್ಟರೆ ಹೋಯಿತು
ವಾಪಸ್ ತೆಗೆದುಕೊಳ್ಳುವ ಸೌಲಭ್ಯವಿದೆಯಾದರೂ ಮಾನವೆಂಬ ಟ್ಯಾಕ್ಸ್ ಕಟ್ ಆಗುತ್ತದೆ
ಮನುಷ್ಯನ ಮಿತ್ರ ಮತ್ತು ಶತ್ರು ಅಥವಾ ಹೆಂಡತಿ
ಮಾತಾಡುವವನೇ ಮಹಾಶೂರ (ಹೆಂಡತಿಯ ಎದುರು)
ಇದು ಉಚಿತ, ತಪ್ಪಿದರೆ ದಂಡನೆ ಖಚಿತ
ಮಾತೆಯರ ಮುಖ್ಯ ಸ್ವತ್ತು
ಮಾತಾ-ಪಿತರ ನಡುವಣ ವಿರಸಕ್ಕೆ ಕೆಲವೊಮ್ಮೆ ಕಾರಣವಾಗುವಂಥದ್ದು
ಸೋತು ಹೋದವರ ಸಮಾಧಾನಗೊಳಿಸಲು ಮಾತು ಬೇಕು
ರಾಜಕಾರಣಿಗಳ ಬಂಡವಾಳ
ದುಷ್ಟರಿಂದ 'ಕಡಿ ಬಡಿ...' ಎನ್ನುವುದಕ್ಕೇ ಬಳಸಲ್ಪಡುವ ನುಡಿ
ವಿಶ್ವನಾಥ ಸುಂಕಸಾಳ
vishwasunkasal@yahoo.com