ಸಹಿ ಹಾಕಲು ಬರುವವ
ಶಾಲೆಗೆ ಹೋಗಿ ಸ್ಯಾನೆ ಕಲಿತು ಶಾಣ್ಯಾ ಅನಿಸಿಕೊಂಡವ
ವಿದ್ಯೆಯನ್ನೇ ಜ್ಞಾನ ಎಂದು ಭಾವಿಸಿ ಅದನ್ನಷ್ಟೇ ಗಳಿಸಿದವ
ಬುದ್ಧಿಯ ಬದಲು ಪ್ರಮಾಣ ಪತ್ರ ಸಂಗ್ರಹಿಸಿ ಇಟ್ಟುಕೊಂಡವ
ಕಾನೂನನ್ನು ಹೇಗೆಲ್ಲ ಮುರಿಯಬಹುದು ಎಂಬುದನ್ನು ಕಲಿತವ
ಅವಿದ್ಯಾವಂತನಲ್ಲಿರುವ ವಿನಯ ಮತ್ತು ನಿರಹಂತೆಗಳನ್ನು ಕಾಲೇಜಿನಲ್ಲೇ ಬಿಟ್ಟು ಬಂದವ
ಹಣವಂತ ಅಪ್ಪಂದಿರು ಮಾತ್ರ ತಮ್ಮ ಮಕ್ಕಳನ್ನು ಆಗಿಸಲು ಸಾಧ್ಯವಾದದ್ದು
ಜ್ಞಾನವಂತ ಶಬ್ದದ ವಿರುದ್ಧ ಪದ
ವಿಜ್ಞಾನ ಓದುತ್ತಾ ಪರಿಜ್ಞಾನವನ್ನು ಮರೆತವ
ನಾಲ್ಕು ಪದ ಬರೆಯಲು ಬಾರದಿದ್ದರೂ ನಾಲ್ಕಾರು ಪದವಿಗಳನ್ನು 'ಗಳಿಸಿಕೊಂಡವ'
-ವಿಶ್ವನಾಥ ಸುಂಕಸಾಳ
vishwasunkasal@yahoo.com