ಕಾಲಘಟ್ಟ

Updated on: 

ಈ ಘಟ್ಟದಿಂದ ಕಾಲು ಜಾರಿ ಬಿದ್ದರೆ ಸೀದಾ ಯಮಾಲಯಕ್ಕೇ ಪ್ರವೇಶ
    ಕುಳಿತಲ್ಲೇ ಕುಳಿತಿದ್ದವರೂ ಈ ಘಟ್ಟ ಹತ್ತಬಹುದು
    ಜೀವನ ಮಟ್ಟವನ್ನು ನಿರ್ಧರಿಸಿ ದಾಖಲಿಸುವ ಇತಿಹಾಸದ ಪುಟ
    ರಾಜ ಪಟ್ಟವೇರಿದವರನ್ನೂ ಕೆಡವಿ ಚಟ್ಟ ಕಟ್ಟುವ ನಿಯಾಮಕ
    ಮರ್ತ್ಯರಿಂದಲೇ ನೈರಂತರ್ಯ ಇದಕ್ಕೆ
    ಘಟವಾಣಿಗಳಿಗೂ "ತೂತು ಘಟ"ವನ್ನು ಒದಗಿಸುವಂಥದ್ದು
    ಕಾಲ ಎಂಬುದು ಘಟ್ಟವಲ್ಲ. ಕಾಲು ಜಾರಿಸುವ ಇಳುಕಲು
    ಮಟ್ಟ ಯಾವುದಾದರೂ ಎಲ್ಲರನ್ನೂ ಸಮಾನವಾಗಿ ಮಟ್ಟ ಹಾಕಿ ಮಟ್ಟಸ ಮಾಡುವಂಥದ್ದು
    ಘಟ್ಟ ಪ್ರದೇಶದವರಿಗೂ ಅನ್ವಯವಾಗುವಂಥದ್ದು
    ಆಳಿದವರು-ಅಳಿದವರ ನಡುವಿನ ಸಂಘರ್ಷದ ಸೂಚಕ
    ದೇಶ, ಭಾಷೆಗಳೆಂಬ ವೇಷಕ್ಕೊಂದು ಮುಖವಾಡ
    ಎಲ್ಲ ಕಾಲಘಟ್ಟಗಳಿಗೂ ಪ್ರಸ್ತುತವಾಗುವಂಥ ಜೀವನ ನಡೆಸಿದವರು ಆಯಾ ಕಾಲಘಟ್ಟದಲ್ಲಿ ಅಪ್ರಸ್ತುತರೆನಿಸಿಕೊಂಡವರೇ ಆಗಿರುತ್ತಾರೆ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com