Assssssss ಎಂದು (ಶ್ರುತಿ) ಲೋಪವಾಗದಂತೆ ತೆಗೆಯುವ ರಾಗ
'ಆಭಾಷಣ'ವೇ ಆಲಾಪ
= ಆಲಾಪದ ನಡುವೆ ಅನರ್ಥಕವಾದ ಮಾತುಗಳೂ ಬಂದರೆ ಅದು ಪ್ರಲಾಪ
ಇಬ್ಬರು ಪಟ್ಟಾಗಿ ಕೂತು ಪಟ್ಟಂಗ ಹೊಡೆಯುತ್ತಾ ಮಾತಿನಲ್ಲೇ 'ಸರ್ಕಾರ ಉರುಳಿಸು'ವುದಕ್ಕೆ ಅನುಲಾಪ
'ಅಯ್ಯೋ ಆಲಾಪದ ಶ್ರುತಿ ಕೆಟ್ಟೋಯ್ತಲ್ಲಪ್ಪಾ' ಎಂದು ಸಖೇದರಾಗ ತೆಗೆದರೆ ಅದು ವಿಲಾಪ
ಒಂದಕ್ಕೊಂದು ಸಂಬಂಧವೇ ಇಲ್ಲದ 'ಅಪರಾತಪರಾ' ಮಾತಾಡಿದರೆ ವಿಪ್ರಲಾಪ
ಬಾ ನಲ್ಲೆ...ಸಂಬಂಧಿಯಾಗೋಣ ಎಂಬಂಥ 'ಸಂಬಂಧಾರ್ಥಕ' ಮಾತನ್ನಾಡಿದರೆ ಅದು ಸಲ್ಲಾಪ
ಮುತ್ತಿನ ಹಾರದಂಥ ಮಾತು- ಸುಪ್ರಲಾಪ
ಅದು ಹಾಗಲ್ಲ ಎಂದು ಗಲ್ಲದ ಮೇಲೆ ಹೊಡೆದಂತೆ ಆಡಿದ ನಿರಾಕರಣೆಯ ಮಾತು- ಅಪಲಾಪ
ವಿಶ್ವನಾಥ ಸುಂಕಸಾಳ