ನದಿನದಿಗಳ ಸಂಗಮದಿಂದ ಜನಿಸಿದ ಜಲಸಂತಾನ
ಬೀಚುಗಳೆಂಬ ತಟದಲ್ಲಿ ಬಿಚ್ಚಿ ಮಲಗುವ ಬಿಳುಚರ ಸ್ವರ್ಗ
ಅಲೆಲೆಲೆಲೆ....ಎನಿಸುವ ಅಲೆಗಳ ಆಗರ
ಅಪ್(ನೀರು)ನ ನಿಧಿ, ಅಸಂಖ್ಯ ತೆರೆಗಳು ಬಂದು ಅಪ್ಪಳಿಸುವ 'ಅಪ್ಪತಿ'
ಮೀನು-ಖಂಡ
ಲವಣದ ಮೂಲ. ಲಾವಣ್ಯದ ಜಾಲ
ಹಡಗುಗಳು ಲಂಗರು ಹಾಕುವ ಬಂದರು ಇರುವ ಜಾಗ
'ಮರುಳು'ಗಾಡು
ಗೋಕರ್ಣ, ಸೋಮನಾಥಗಳಂಥ ಹೆಚ್ಚಿನ ಪುಣ್ಯಕ್ಷೇತ್ರಗಳು ನೆಲೆಯೂರಿರುವ ಕ್ಷೇತ್ರ
ಚಿಕ್ಕ ಪುಟ್ಟ ತೊರೆಗಳೆಲ್ಲ ಇದನ್ನು ನೋಡಿ 'ಜಲಸಿ' ಅನುಭವಿಸುವಂತಿರುವ ಜಲಧಿ
ವಿಶ್ವನಾಥ ಸುಂಕಸಾಳ