ಪೈಪು ಮಾರಾಟಗಾರರ ನಡುವಿನ ಸ್ಪರ್ಧೆ
'ಪೈ' ಕಂಪೆನಿ ಹುಟ್ಟುಹಾಕಿದ ಬೆಲೆ ಸಮರ
ತಾ ಹೆಚ್ಚು ನಾ ಹೆಚ್ಚು ಎನ್ನುವಂಥ ಹೆಚ್ಚುಗಾರಿಕೆಗಾಗಿನ ಹುಚ್ಚು
ಆರೋಗ್ಯದಾಯಕ ಪೈಪೋಟಿ ಆರೋಗ್ಯಕ್ಕೆ ಉತ್ತಮ
ಟೀ ಮಾರಾಟಗಾರರ ತುರುಸು
ಯಾರು ಹೆಚ್ಚು ಮಾರುತ್ತಾರೆಂಬ ವಿಷಯದಲ್ಲಿನ ಮಾರಾಟಗಾರರ ನಡುವಿನ ಮಾರಾ'ಮಾರಿ'
ವಾಹನದ ವೇಗದಲ್ಲಿ ಪೈಪೋಟಿಗಿಳಿಯಬಾರದು. ಅದು ನಮ್ಮ ನಾಡಿಮಿಡಿತದ ವೇಗವನ್ನು ಶಾಶ್ವತವಾಗಿ ತಗ್ಗಿಸುವ ಅಪಾಯವಿರುತ್ತದೆ
ಕಂಪೆನಿಗಳು ಕಂಪಿಸುವುದು ಈ ವಿಷಯದಲ್ಲೇ
ಪೈಪು ಸೇದುವುದರಲ್ಲಿನ ಬಿರುಸು
ಅಧಿಕ ಲಾಭದ ಹಿಂದೆ ಬೀಳುವ ಲೋಭಿ ಮನಸಿನ ಕಾರ್ಯ
ಆ ಪಾಟಿ ಪೈಪೋಟಿಗೆ ಬಿದ್ದರೆ ಕೊನೆಗೊಮ್ಮೆ ಪಾಟಿ ಹಿಡಿಯುವ ಸಂದರ್ಭ ಬಂದೀತು
ಓ.ಟಿ.ಯಲ್ಲಿದ್ದರೂ ಕೋಟಿಯದ್ದೇ ಚಿಂತೆ ಮಾಡುವವಗೆ ಪೈಪೋಟಿಯೇ ಅನಿವಾರ್ಯ
ವಿಶ್ವನಾಥ ಸುಂಕಸಾಳ