ಗುಣವಂತರಿಗೆ ಗುಣದ ಸೌಂದರ್ಯದ ಮುಂದೆ ಉಳಿದದ್ದೆಲ್ಲ ಗೌಣವೆನಿಸುವುದು
ಇದನ್ನು ದೇವರು ಇಂತಿಂಥವರಿಗೆ ಇಂತಿಷ್ಟು ಎಂದು ಕೊಟ್ಟಿರುತ್ತಾನೆ. ಹಾಗಾಗಿ ಇದು ದೈವಾರ್ಜಿತ
ಕನ್ನಡಿ ಮುಂದೆ ತಾನು ಮಾಡಿಕೊಂಡ ಅಲಂಕಾರ ಸ್ವಯಾರ್ಜಿತ
ಇದಿಲ್ಲದಿದ್ದರೆ ಒಂದಿಷ್ಟು ಜನರ ಕಿಸೆ ತುಂಬಿಯೇ ಇರುತ್ತಿತ್ತು
ಕಣ್ಣಿರುವುದು ಸೌಂದರ್ಯ ಆಸ್ವಾದಿಸಲು ಎಂಬುದು ಸತ್ಯವಾದರೂ ತನ್ನ ಹೆಂಡತಿಯನ್ನು ಮಾತ್ರ ಯಾರೂ ನೋಡಬಾರದು ಎಂಬುದು ಎಲ್ಲ ಗಂಡಂದಿರ ಆಸೆ.
ಮುಖದ ಮೇಲಿನ ಚೆಂದ'ಸ್ಸು
'ಕ್ಯೂಟಿ' ಎನಿಸಿಕೊಳ್ಳಲು ಕಾರಣವಾದ ಬ್ಯೂಟಿ
ಗಂಡಸು ಮತ್ತು ಗಡಸು ಶಬ್ದದ ವಿರುದ್ಧ ಪದ
ಕವಿಗಳ ಕಾವ್ಯದ ಮುಖ್ಯವಸ್ತು
ಅಂದವುಳ್ಳವನೇ ಅಂದರಿಕಿ ಮಂಚಿವಾಡು
ಇಂದಿನ ಕಾಲದಲ್ಲಿ ಸ್ವರೂಪಕ್ಕಿಂತ ಹೆಚ್ಚಿನ ಬೆಲೆಬಾಳುವ ಅಂಶ ಈ ಸುರೂಪ
ಕೆಲವರಿಗೆ ಬಣ್ಣ ಬದಲಾಯಿಸುವುದು ಚೊಣ್ಣ ಬದಲಾಯಿಸಿದಷ್ಟೇ ಸುಲಭ
ಸೌಂದರ್ಯ ಪ್ರಜ್ಞೆ ಎಲ್ಲ ಹೆಂಗಸರ ವಂಶವಾಹಿಯಲ್ಲೂ ಇರುತ್ತದೆ ಆದರೆ ಸೌಂದರ್ಯ ಇರುವುದು ಕೆಲವರಲ್ಲಿ ಮಾತ್ರ
ಪ್ರಕೃತಿ ಶಬ್ದದ ಸಮಾನಾರ್ಥಕ
-ವಿಶ್ವನಾಥ ಸುಂಕಸಾಳ
vishwasunkasal@yahoo.com