ಮಾರ್ಗ

Updated on: 

ಮುರ್ಗಿ ನಡೆದದ್ದೇ ಮುರ್ಗನಿಗೆ ಮಾರ್ಗ
=     ಹದಿ ವಯಸ್ಸಿನವರು ಹೆಚ್ಚಾಗಿ ತಪ್ಪುತ್ತಾರೆಂಬ ಆರೋಪವುಳ್ಳ ಹಾದಿ
=     ದಂಡಪಿಂಡರ ಕಾಲಯಾಪನಾ ಬೀದಿ
=     ಪಥಿಕರು ಅಥವಾ ರಥಿಗಳು ಸಾಗುವ ಪಥ
=     ಬೀದಿ ನಾಯಿಗಳ ವಾಸಸ್ಥಳ ಅಥವಾ ಅವುಗಳಿಂದಾಗಿರುವ ವಾಸನಾ ಸ್ಥಳ
=     ಕುಡುಕರ ಸ್ವರ್ಗ
=     ಎಂಥಾ ಸಮಸ್ಯೆ ತಲೆದೋರಿದರೂ ಹೀಗೇ ಸಾಗಬೇಕೆಂದು ಹಿರಿಯರಿಂದ ನಿರ್ದೇಶಿಸಲ್ಪಟ್ಟಿರುವ ೋಮದಾರಿ
=     ನಡೆಯಲಾರದವನಿಗೆ ಮಾರ್ಗ ಡೊಂಕು
=     ಯಾವ ರಸ್ತೆಯಲ್ಲಿ ಸಾಗುತ್ತೀರೆಂಬುದು ನಿಮ್ಮ ಆಸ್ಥೆಗೆ ಬಿಟ್ಟಿದ್ದು
=     ಏಕಮುಖ ಸಂಚಾರೀ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಡೆದರೆ ಯಾರೂ ಸ್ಪರ್ಧಿಗಳೇ ಸಿಗುವುದಿಲ್ಲ
=     ಮಾರ್ಗಭ್ರಷ್ಟತೆ ಎಂಬುದು ಎಲ್ಲ ಭ್ರಷ್ಟತೆಗಳ ತಾಯಿ
=     ಗಂಡುಬೀರಿಗಳು ಬಿಡು ಬೀಸಾಗಿ ನಡೆಯುವ ರೋಡು
=     ಅಪಾಯಕ್ಕೆ ಬದಲಿ ಮಾರ್ಗ ಎನ್ನುವುದಿಲ್ಲ. ಬದಲೀ ಮಾರ್ಗವೇ ಹಲವೊಮ್ಮೆ ಅಪಾಯಕಾರಿ
=     ನಾವು ಗಡಿಬಿಡಿಯಲ್ಲಿರುವಾಗಲೇ ಮಾರ್ಗ ದುರಸ್ತಿಯಲ್ಲಿರುತ್ತದೆ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com