ಎಲ್ಲದಕ್ಕೂ ತೊಡರು ಈ ಎರಡುಅದೋ ಇದೋ ಎಂದು ಅನುಮಾನದ ಎರಡು ಮನಸು
ದ್ವೈತದ ಮೂಲ
ಎರಡನೆಯದಿದೆ ಎಂಬ ಭಾವನೆಯೇ ಇದಕ್ಕೆ ಕಾರಣ
ಏಕತೆಗೆ ಭಂಗ ತರುವ ಆ ಕತೆ, ಈ ಕತೆ ಎಂಬ ಹಲವಾತ್ಮತೆ
ಒಂದನೇ ಸ್ಥಾನದಿಂದ ಪ್ರಚ್ಯುತಗೊಳಿಸಿ ಎರಡನೆಯದಕ್ಕೆ ಜಾರಲು ಹಲವೊಮ್ಮೆ ಇದೇ ಕಾರಣ
ಹೆಚ್ಚು ಕಡಿಮೆಯೆಂಬ ತರ-ತಮ ಭಾವದಿಂದೊಗುವ ಮನಸಿನ ತಕಧಿಮಿತ
ಎಲ್ಲ ವಯೋವಾನದವರಿಗೂ ಬಾಧಿಸುವ ಸಂಶಯ
ಒಂದರೊಡನೊಂದು ಕೂಡಿ ಇರುವ ಜೋಡಿ
ಒಬ್ಬರಿಗಿಂತ ಇಬ್ಬರೊಳ್ಳೆಯದು ಎಂಬ ಇಬ್ಬಗೆಯ ರೀತಿ
ದ್ವಂದ್ವ ಸಮಾಸದಲ್ಲಿ ಮಾತ್ರ ಇದು ವಿರುದ್ಧ. ಇಲ್ಲಿ ಅನೇಕ ಶಬ್ದಗಳು ಸೇರಿ ಏಕವಾಗುತ್ತವೆ
ಹಾಗಾ ಅಥವಾ ಹೀಗಾ ಎಂಬ ಸಂಶಯದ ರಾಗ
ಬಟ್ಟೆ ಖರೀದಿಸುವಾಗ ಇದು ಕಾಡುತ್ತದೆ
ಉಚಿತಾನುಚಿತದ ಬಗೆ ಖಚಿತವಿಲ್ಲದಾಗ ಎದುರಾಗುವ ಸ್ಥಿತಿ
ನಿರ್ದ್ವಂದ್ವ ಸ್ಥಿತಿಗೆ ತಲುಪುವುದೇ ಮಾನವನ ನಿಜವಾದ ಸಾರ್ಥಕ್ಯ
ದ್ವಂದ್ವ ಸಂಸಾರ. ಅದು ನಿಸ್ಸಾರವೆನಿಸಿದಾಗ ನಿರ್ದ್ವಂದ್ವ
-ವಿಶ್ವನಾಥ ಸುಂಕಸಾಳ
vishwasunkasal@yahoo.com