ತಲವಾಟ ಮಂಜುನಾಥ, ಸಾಗರ, 9480931611
ಹೆಣ್ಣಿನ ಬಳಿ ಪುರುಷ ಮಾತನಾಡಿದರೆ ಇನ್ನೊಂದು ಹೆಣ್ಣು ಗುರಾಯಿಸಿ ನೋಡುವುದೇಕೆ?
ಅವಳ ಬಳಿ ಮಾತನಾಡಿಲ್ಲವಲ್ಲ ಎಂಬ ಅಸೂಯೆ!
ಆರ್.ಸಿ. ಪರಶುರಾಮ, 9902203492
ಕೋರ್ಟಿನಲ್ಲಿ ಜಡ್ಜ್ ಸೈಲೆನ್ಸ್ ಸೈಲೆನ್ಸ್ ಅನ್ನುವ ಬದಲು ಆರ್ಡರ್ ಆರ್ಡರ್ ಎನ್ನುವುದೇಕೆ?
ಬಸ್ಸು ಲೆಫ್ಟಿನಲ್ಲೇ ನಿಂತಿದ್ದರೂ ಕಂಡಕ್ಟರ್ ರೈಟ್ ರೈಟ್ ಹೇಳುತ್ತಾನಲ್ಲಾ ಅದಿಕ್ಕೇ!
ಶ್ರೀಧರ್ ಡಿ. ರಾಮಚಂದ್ರಪ್ಪ, 9880791106
ಸೋಲೇ ಗೆಲುವಿನ ಮೆಟ್ಟಿಲು, ಸೋಲೇ ಗೆಲುವಿಗೆ ಸೋಪಾನ ಅಂತಾರಲ್ಲ ಯಾಕೆ?
ಶೋಲೆ ಗೆಲುವಿನ ಮೆಟ್ಟಿಲು ಎಂದು ಅಮಿತಾಬ್ ಹೇಳಿದ್ದನ್ನು ಜನ ತಪ್ಪಾಗಿ ತಿಳಿದಿದ್ದಾರೆ!
ಕಂಚಿಗನಹಳ್ಳಿ ಧನಂಜಯ, 9141308498
ಸ್ವಯಂ ಘೋಷಿತ ಬುದ್ದಿಜೀವಿಗಳು ಮೋದಿ ಪ್ರಧಾನಿಯಾದರೆ ದೇಶದಲ್ಲಿಯೇ ಇರಲ್ಲಾ ಅಂದ್ರು. ಇಲ್ಲೇ ತಿರುಗಾಡ್ತಾ ಇದ್ದಾರಲ್ಲಾ?
ಪರದೇಶದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಜ್ಞಾನೋದಯವಾಗಿರಬೇಕು.
ನೇರಲಗುಡ್ಡ ಶಿವಕುಮಾರ್, 9480343742
ನೀರಿಗೂ ಪೆಟ್ರೋಲ್‌ಗೂ ಇರುವ ಭಿನ್ನತೆ ಏನು?
ಒಂದು ಬಾಡಿಗೆ ಇನ್ನೊಂದು ಗಾಡಿಗೆ!
ಬಾಣಭಟ್ಟ