ಬಯೋಪಿಕ್ ಅಲ್ಲ, ಹಾಸ್ಯಚಿತ್ರ ನಿರ್ಮಿಸಬೇಕಿತ್ತು: ಪ್ರಧಾನಿ ಮೋದಿ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ

ಪಿಎಂ ನರೇಂದ್ರ ಮೋದಿ ಬಯೋಪಿಕ್ ಅಲ್ಲ, ಅವರ ಕುರಿತ ಹಾಸ್ಯ ಚಿತ್ರ ನಿರ್ಮಿಸ ಬೇಕಿತ್ತು ಎಂದು ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮುಂಬೈ: ಪಿಎಂ ನರೇಂದ್ರ ಮೋದಿ ಬಯೋಪಿಕ್ ಅಲ್ಲ, ಅವರ ಕುರಿತ ಹಾಸ್ಯ ಚಿತ್ರ ನಿರ್ಮಿಸ ಬೇಕಿತ್ತು ಎಂದು ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಊರ್ಮಿಳಾ, 'ಐದು ವರ್ಷ ಕಾಲ ದೇಶದ ಪ್ರಧಾನಿಯಾಗಿ ಸಮಾಜಕ್ಕೆ ಯಾವುದೇ ರೀತಿಯ ಕೊಡುಗೆ ನೀಡದ ನರೇಂದ್ರ ಮೋದಿ ಬಯೋಪಿಕ್‌ ಗೆ ಅರ್ಹ ವ್ಯಕ್ತಿಯಲ್ಲ; ಅವರ ಬಗ್ಗೆ ಹಾಸ್ಯಚಿತ್ರ (ಕಾಮಿಡಿ) ನಿರ್ಮಿಸಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
'ಅವರ ಜೀವನದ ಘಟನೆಗಳನ್ನು ಆಧರಿಸಿದ ಚಲನಚಿತ್ರ ನಿರ್ಮಿಸಲಾಗಿದೆ. ಆದರೆ ಪ್ರಧಾನಿಯಾಗಿ ಅವರ ಜೀವನ ದೊಡ್ಡ ತಮಾಷೆ. 56 ಇಂಚಿನ ಎದೆ ಹೊಂದಿರುವುದಾಗಿ ಹೇಳಿಕೊಂಡ ಅವರು ಕಳೆದ ಐದು ವರ್ಷಗಳಲ್ಲಿ ಯಾವ ಸಾಧನೆಯನ್ನೂ ಮಾಡಲಿಲ್ಲ. ಅವರ ಬಗೆಗಿನ ಚಿತ್ರ ಭಾರತದ ಪ್ರಜಾಪ್ರಭುತ್ವ, ಬಡತನ ಹಾಗೂ ವೈವಿಧ್ಯತೆಯ ಅಣಕ. ಇವೆಲ್ಲಕ್ಕೂ ಅವರು ಧಕ್ಕೆ ತಂದಿದ್ದಾರೆ. ವಾಸ್ತವವಾಗಿ ಅವರು ಈಡೇರಿಸದ ಭರವಸೆಗಳ ಬಗ್ಗೆ ಹಾಸ್ಯಚಿತ್ರ ನಿರ್ಮಿಸಬೇಕಿತ್ತು. ಪ್ರಜಾಪ್ರಭುತ್ವ ಹೊಂದಿದ ದೇಶದ ಪ್ರಧಾನಿಯೊಬ್ಬರು ಐದು ವರ್ಷಗಳಲ್ಲಿ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ ಎಂದಾದರೆ ಇದಕ್ಕಿಂತ ಕೆಟ್ಟದ್ದು ಏನಿದೆ ಎಂದು ಊರ್ಮಿಳಾ ಕಿಡಿಕಾರಿದ್ದಾರೆ.
ಊರ್ಮಿಳಾ ಮಾಂತೋಡ್ಕರ್ ಕಳೆದ ತಿಂಗಳು ಕಾಂಗ್ರೆಸ್ ಪಕ್ಷ ಸೇರಿದ್ದು, ಉತ್ತರ ಮುಂಬೈ ಕ್ಷೇತ್ರದಲ್ಲಿ ಹಾಲಿ ಸಂಸದ ಗೋಪಾಲ ಶೆಟ್ಟಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com