ಮೋದಿಯವರ ಬಯೋಪಿಕ್ ಸಿನಿಮಾ ನೋಡಿದ ಬಳಿಕ ಸಿನಿಮಾ ಬಿಡುಗಡೆ ಬಗ್ಗೆ ತೀರ್ಮಾನಿಸಿ ಏ.22ರೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಈ ಹಿಂದೆ ಸೂಚನೆ ನೀಡಿತ್ತು. ಅದಾದ ಬಳಿಕ ಏ.17ರಂದು ಆಯೋಗದ ಏಳು ಅಧಿಕಾರಿಗಳನ್ನೊಳಗೊಂಡ ತಂಡ ಪಿಎಂ ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾವನ್ನು ವೀಕ್ಷಿಸಿತ್ತು. ಈಗ ಆಯೋಗ ತನ್ನ ವರದಿ ನೀಡಿದೆ. ಆಯೋಗದ ವರದಿಯಲ್ಲಿ 'ಈ ಬಯೋಪಿಕ್ ನಲ್ಲಿ ನರೇಂದ್ರ ಮೋದಿಯವರನ್ನು ತುಂಬ ಪ್ರಶಂಸಿಸಿ ಚಿತ್ರಿಸಲಾಗಿದೆ. ಅಲ್ಲದೆ ಬಹುತೇಕ ಪ್ರತಿಪಕ್ಷಗಳು ಭ್ರಷ್ಟವೆಂದು ಹಲವು ದೃಶ್ಯಗಳಲ್ಲಿ ಬಿಂಬಿಸಲಾಗಿದೆ.