ತಂದೆ ಭ್ರಷ್ಟರಾಗಿದ್ದರೆಂದು ಹೇಳಿದ ಮಾತ್ರಕ್ಕೆ ರಾಹುಲ್ ಕಸಿವಿಸಿಗೊಳ್ಳುವುದೇಕೆ: ಅರುಣ್ ಜೇಟ್ಲಿ ಪ್ರಶ್ನೆಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾಯುವ ವೇಳೆ ಅತ್ಯಂತ ಭ್ರಷ್ಟರಾಗಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನಂ.1 ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯೊಂದಿಗೆ ನಿಮ್ಮ ತಂದೆ ಜೀವನ ಕೊನೆಯಾಗಿತ್ತು: ರಾಹುಲ್ ಗೆ ಮೋದಿ ಟಾಂಗ್ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ....
ಅನಾರೋಗ್ಯಪೀಡಿತರಿಗೆ ಖಿಚಡಿಯೇ ಬೇಕು: ಪ್ರಧಾನಿ 'ಖಿಚಡಿ' ಹೇಳಿಕೆಗೆ ಶಶಿ ತರೂರ್ ಟಾಂಗ್ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ....
ರಾಹುಲ್ ಗಾಂಧಿ 'ಪಪ್ಪು' ಅಲ್ಲ ಅತ್ಯುನ್ನತ ವಿದ್ಯಾವಂತರು - ಸ್ಯಾಮ್ ಪಿತ್ರೋಡಾಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ಅತ್ಯುನ್ನತ ಶಿಕ್ಷಣ ಪಡೆದಿದ್ದು, ದೇಶಕ್ಕೆ ಯುವ ನಾಯಕತ್ವದ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ನಾಳೆ ಐದನೇ ಹಂತದ ಚುನಾವಣೆ: ಸೋನಿಯಾ, ರಾಹುಲ್, ರಾಜನಾಥ್ ಮತ್ತಿತರರ ಭವಿಷ್ಯ ನಿರ್ಧಾರದೇಶದ ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತಿತರ ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಹಲ್ಲೆ- ಕೇಜ್ರಿವಾಲ್ತಮ್ಮ ಮೇಲಿನ ಹಲ್ಲೆ ಕುರಿತಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು ಒಂಬತ್ತನೇ ಬಾರಿ ಹಾಗೂ ಮುಖ್ಯಮಂತ್ರಿ ಆದ ನಂತರ ನಡೆದ ಐದನೇ ಹಲ್ಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
'ವಿಶ್ವಸಂಸ್ಥೆ ಮೋದಿ ಜೇಬಲಿಲ್ಲ, ದಿಟ್ಟ ನಿರ್ಧಾರಕ್ಕೆ ಪ್ರಬಲ ನಾಯಕತ್ವ ಬೇಕು': 'ಕೈ' ವಿರುದ್ಧ ಶಿವಸೇನೆ ಕಿಡಿಉಗ್ರರ ವಿರುದ್ಧದ ಹೋರಾಟಕ್ಕೆ ಯಾವುದೇ ಸಮಯವಿಲ್ಲ.. ದಿಟ್ಟ ನಿರ್ಧಾರಕ್ಕೆ ಪ್ರಬಲ ನಾಯಕತ್ವ ಬೇಕು. ಇದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಶಿವಸೇನೆ ಹೇಳಿದೆ.
ಮೋದಿ ಸರ್ಕಾರ ಕಿತ್ತೊಗೆಯುವುದೇ ಗುರಿ, ಮಹಾಘಟ್ ಬಂಧನ್ ಸೂಕ್ತ ಸಮಯದಲ್ಲಿ ಒಂದಾಗುತ್ತದೆ: ಸ್ಯಾಮ್ ಪಿತ್ರೋಡಾಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಮಹಾಘಟ್ ಬಂಧನ್ ಒಂದಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
125 ದಿನಗಳಲ್ಲಿ 200 ಕಾರ್ಯಕ್ರಮಗಳು!: ಇದು ದಣಿವರಿಯದ ಪ್ರಧಾನಿ ಮೋದಿಯ ಚುನಾವಣಾ ಪ್ರಚಾರ!ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚಾರ ಮಾಡುತ್ತಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ವಾರಣಾಸಿ: ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ದ 24 ರೈತರ ನಾಮಪತ್ರ ತಿರಸ್ಕೃತ!ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾರ್ಥವಾಗಿ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಕಣಕ್ಕಿಳಿದಿದ್ದ 24 ಮಂದಿ ರೈತರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ತಿಳಿದುಬಂದಿದೆ.
ಮಹಾತ್ಮ ಮಾತ್ರ ನಿಜವಾದ ಗಾಂಧಿ: ನೆಹರು ಕುಟುಂಬದ ವಿರುದ್ಧ ಉಮಾ ಭಾರತಿ ವಾಗ್ದಾಳಿಗಾಂಧಿ-ನೆಹರು ಕುಟುಂಬದ ವಿರುದ್ಧ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ. ಗಾಂಧಿ ಸರ್ ನೇಮ್ ಬಳಸುತ್ತಿರುವವರೆಲ್ಲಾ ನಕಲಿಗಳು ಎಂದು, ...
ಕಾಂಗ್ರೆಸ್ ಗೆ ಸುಳ್ಳು ಹೇಳುವ ಚಾಳಿ ಇದೆ: 6 ಸರ್ಜಿಕಲ್ ದಾಳಿ ಬಗ್ಗೆ ವಿಕೆ ಸಿಂಗ್ ವ್ಯಂಗ್ಯತಾವು ಸೇನಾ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಯಾವುದೇ ಸರ್ಜಿಕಲ್ ದಾಳಿ ನಡೆದಿಲ್ಲ ಎಂದಿರುವ ಕೇಂದ್ರ ಸಚಿವ ವಿ.ಕೆ ಸಿಂಗ್ ಅವರು, ಕಾಂಗ್ರೆಸ್ಗೆ ಸುಳ್ಳು...
ದೆಹಲಿ: ಆಮ್ ಆದ್ಮಿ ಪಕ್ಷದ ಪರ ಪ್ರಕಾಶ್ ರಾಜ್ ಪ್ರಚಾರಕೋಮು ಮತ್ತು ದ್ವೇಷದ ರಾಜಕೀಯದದಿಂದಾಗಿ ಅಳಿವಿನ ಅಂಚಿನಲ್ಲಿರುವ ದೇಶದ ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಜನರು ಒಗ್ಗೂಡಬೇಕಾಗಿದೆ ಎಂದು ಹೇಳಿರುವ ನಟ, ರಾಜಕಾರಣಿ ಪ್ರಕಾಶ್ ರಾಜ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ರೋಡ್ ಶೋ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕಪಾಳಮೋಕ್ಷದೆಹಲಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಶನಿವಾರ ನಡೆದಿದೆ.
ಪ್ರತಿಪಕ್ಷಗಳು ಗೆದ್ದರೆ, ಪ್ರತಿದಿನ ಒಬ್ಬೊಬ್ಬ ಪ್ರಧಾನಿ- ಅಮಿತ್ ಶಾಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿದಿನ ಒಬ್ಬೊಬ್ಬ ಪ್ರಧಾನ ಮಂತ್ರಿ ನೋಡಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!