ದೇಶ

ಪತ್ನಿ ಹೆಸರೇಳಲು ಇಷ್ಟು ವರ್ಷ ಬೇಕಾಯ್ತೇ: ರಾಹುಲ್ ಪ್ರಶ್ನೆ

ಪತ್ನಿ ಹೆಸರೇಳಲು ಇಷ್ಟು ವರ್ಷ ಬೇಕಾಯ್ತೇ: ರಾಹುಲ್ ಪ್ರಶ್ನೆ
Published On :

ದೋಡಾ: ಕಾಂಗ್ರೆಸ್ ಉಪಾಧ್ಯಕ್ಷ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಮೋದಿ ಮದುವೆಯ ವಿಚಾರ ಎತ್ತಿದ್ದಾರೆ. ಮಹಿಳೆ ಸುರಕ್ಷತೆ ಕುರಿತು ಮಾತನಾಡುವ ಮೋದಿ ಅವರಿಗೆ ತಮ್ಮ ಪತ್ನಿ ಹೆಸರು ಹೇಳಲು ಇಷ್ಟು ವರ್ಷ ಬೇಕಾಯ್ತೇ ಎಂದು ಪ್ರಶ್ನಿಸಿದ್ದಾರೆ.

 ರಾಹುಲ್ ಹೇಳಿದ್ದೇನು?
-ಈವರೆಗೆ ಅವರು(ಮೋದಿ) ಎಷ್ಟು ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆಂದೇ ಗೊತ್ತಿಲ್ಲ. ಆದರೆ, ಮದುವೆಯಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದು ಇದೇ ಮೊದಲು.
-ದೆಹಲಿಯಲ್ಲಿ ಮಹಿಳೆಯರ ಆತ್ಮಗೌರವದ ಕುರಿತು ಮಾತನಾಡುತ್ತಾರೆ. ಆದರೆ, ಅವರ ಸ್ವಂತ ಪತ್ನಿ ಹೆಸರು ಅಫಿಡವಿಟ್‌ನಲ್ಲಿ ನಮೂದಾಗುವುದಿಲ್ಲ. ಇದು ಮಹಿಳೆಯರಿಗೆ ನೀಡುವ ಗೌರವವೇ?
-ಮೋದಿ ಹಾಗೂ ಗುಜರಾತ್ ಪೊಲೀಸರ ಸಂಪೂರ್ಣ ಗಮನ ಕೇವಲ ಒಂದೇ ಮಹಿಳೆಯ ದೂರವಾಣಿ ಕದ್ದಾಲಿಸುವುದಕ್ಕೆ ಸೀಮಿತವಾಗಿದೆ. ಗುಜರಾತ್ ಪೊಲೀಸರು ಆ ಮಹಿಳೆ ಹಿಂದೆ ಓಡುತ್ತಾರೆ. ಯಾಕೆಂದರೆ ಮೋದಿಗೆ ಆ ಮಹಿಳೆ ಕುರಿತು ಕುತೂಹಲವಿದೆ.
-ಜಾರ್ಖಂಡ್‌ನಲ್ಲಿ 20 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಅವರೆಲ್ಲಿದ್ದಾರೆ ಎನ್ನುವುದು ಈವರೆಗೆ ಯಾರಿಗೂ ಗೊತ್ತಿಲ್ಲ.
-ಬಿಜೆಪಿಯ ಹಿರಿಯ ಮುಖಂಡ ಆಡ್ವಾಣಿ, ಜಸ್ವಂತ್ ಸಿಂಗ್‌ರನ್ನು ಬಿಜೆಪಿಯಿಂದ ಹೊರಗಟ್ಟಲಾಯಿತು. ಆದರೆ, ಅದಾನಿಗೆ ಎಲ್ಲವನ್ನೂನೀಡಲಾಯಿತು.

 ಚುನಾವಣೆ ಬಂದಾಗ ಮಾತ್ರ
ಬಾಲಸೋರ್/ಬದೌನ್:
ಕಾಂಗ್ರೆಸ್ ಮುಖಂಡರಿಗೆ ಚುನಾವಣೆ ಬಂದಾಗಲಷ್ಟೇ ಬಡವರು ಮತ್ತು ಬಡತನದ ನೆನಪಾಗುತ್ತದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟಾಂಗ್ ನೀಡಿದ್ದಾರೆ. ಒಡಿಶಾ, ಛತ್ತೀಸ್‌ಗಡದಲ್ಲಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದ ಮೋದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

 ಮೋದಿ ಹೇಳಿದ್ದೇನು?
-ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಲು ಬಯಸಿದ್ದರು. ದೇಶ ಕಾಂಗ್ರೆಸ್ ಮುಕ್ತಗೊಂಡಾಗಲಷ್ಟೇ ಭ್ರಷ್ಚಾಚಾರ ಮುಕ್ತಗೊಳ್ಳಲು ಸಾಧ್ಯ. ಇದಕ್ಕಾಗಿ ಜನ ನನಗೆ ಶಕ್ತಿ ನೀಡಬೇಕು.
-ಚುನಾವಣೆ ಸಂದರ್ಭದಲ್ಲಷ್ಟೇ ಕೆಲ ಮುಖಂಡರು ಬಡವರ ಮನೆಗೆ, ಕೇದಾರನಾಥ ಮತ್ತು ಬದರಿನಾಥ್‌ನಂಥ ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಾರೆ. ಈ ವೇಳೆ ಅವರು ಮಾಧ್ಯಮದವರನ್ನೂ ಕರೆದೊಯ್ಯುತ್ತಾರೆ. ಇವರಿಗೆ(ಕಾಂಗ್ರೆಸ್) ಚುನಾವಣೆ ಬಂದಾಗಲಷ್ಟೇ ಬಡವರ ನೆನಪಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.