ಹಕ್ಕು ಚಲಾಯಿಸದ ಕ್ರಿಕೆಟಿಗರು

-ಮಲ್ಲಿಕಾರ್ಜುನ ಕರಿಯಪ್ಪನವರ
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಆರ್. ವಿನಯ್ ಕುಮಾರ್, ದಿನೇಶ್ ಕಾರ್ತಿಕ್ ಇವರೆಲ್ಲಾ ಯುವ ಜನಾಂಗಕ್ಕೆ ಮಾದರಿ. ಆದರೆ, ಯುವಕರಿಗೆ ಮಾದರಿಯಾದ ಘಟಾನುಟಿಗಳೇ ಮತದಾನದಿಂದ ದೂರ ಸರಿದರೆ, ಜನಸಾಮಾನ್ಯರಲ್ಲಿ ಮತದಾನ ಜಾಗೃತಿ ಮೂಡಿಸುವುದು ಹೇಗೆ?
ಇಡೀ ದೇಶಕ್ಕೆ ದೇಶವೇ ಮಹತ್ವದ ಸಾರ್ವತ್ರಿಕ ಚುನಾವಣೆಯ ಬೇಗುದಿಯಲ್ಲಿದೆ. ರಾಜಕಾರಣಿಗಳು ಯಾರು ಎಷ್ಟು ಮತ ಪಡೆಯುತ್ತಾರೆ. ಮತಗಳನ್ನು ಸೆಳೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿದ್ದರೆ, ಮತದಾರರು ಯಾರಿಗೆ ಮತದಾನ ಮಾಡಬೇಕು ಎಂಬ ಜಿಜ್ಞಾಸೆಯಲ್ಲಿದ್ದಾರೆ. ಆದರೆ, ಕ್ರಿಕೆಟಿಗರು ಮಾತ್ರ ಚುನಾವಣೆಯ ಗೊಡವೆ ಬಿಟ್ಟು ದೂರದ ಅರಬ್ಬರ ನಾಡಿನಲ್ಲಿ ನಡೆಯುತ್ತಿರುವ ಐಪಿಎಲ್ ಅಬ್ಬರದಲ್ಲಿ ಮುಳುಗಿದ್ದಾರೆ. ಅವರಿಗೆ ಮತದಾನದ ಗೊಡವೆಯೇ ಬೇಡವಾಗಿದೆ.
ಒಟ್ಟು 10 ಹಂತದ ಮತದಾನದಲ್ಲಿ ಈಗಾಗಲೇ 5 ಹಂತದಲ್ಲಿ ಮತದಾನ ಮುಕ್ತಾಯಗೊಂಡಿದೆ. ಆದರೆ, ಆ 5 ಹಂತದಲ್ಲಿ ಡೆಲ್ಲಿಯಲ್ಲಿ ಮಾತ್ರ ಹೆಚ್ಚಿನ ಕ್ರಿಕೆಟಿಗರು ಇದ್ದಾರೆ. ಬಿಟ್ಟರೆ, ಇನ್ನು ಮುಂದೆ ನಡೆಯುವ 5 ಹಂತದ ಮತದಾನದಲ್ಲಿ ಬರುವ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲೇ ಅತಿ ಹೆಚ್ಚು ಕ್ರಿಕೆಟಿಗರು ಇದ್ದಾರೆ. ಆದರೆ, ಅವರೆಲ್ಲರೂ ಈಗ ದುಬೈನಲ್ಲಿ ಬ್ಯಾಟ್, ಚೆಂಡು, ರನ್, ವಿಕೆಟ್ನಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ.
ಯಾವ ರಾಜ್ಯದಲ್ಲಿ ಎಷ್ಟು ಕ್ರಿಕಿಟಿಗರು: ಮಹಾರಾಷ್ಟ್ರ ಹೊರತುಪಡಿಸಿದರೆ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕ್ರಿಕೆಟಿಗರು ಮತದಾನದಿಂದ ಹೊರಗುಳಿದಿದ್ದಾರೆ. ಅದರಲ್ಲಿ ಮಹಾರಾಷ್ಟ್ರದವರ ಪಾಲೇ ಹೆಚ್ಚು. ಮಹಾರಾಷ್ಟ್ರದಿಂದ 14, ಕರ್ನಾಟಕದಿಂದ 11, ಗುಜರಾತ್ನಿಂದ 10, ಉತ್ತರ ಪ್ರದೇಶ 8, ಪಶ್ಚಿಮ ಬಂಗಾಳದಿಂದ 8, ಮಧ್ಯಪ್ರದೇಶದಿಂದ 5, ಹರ್ಯಾಣದಿಂದ 5, ಆಂಧ್ರಪ್ರದೇಶದಿಂದ 5, ಪಂಜಾಬ್ನಿಂದ 5, ಜಾರ್ಖಂಡ್ನಿಂದ 3, ಜಮ್ಮು ಮತ್ತು ಕಾಶ್ಮೀರದಿಂದ 2, ಬಿಹಾರದಿಂದ 2, ರಾಜಸ್ಥಾನದಿಂದ 2, ಉತ್ತರಾಂಚಲದಿಂದ 1, ಹಿಮಾಚಲದಿಂದ 1. ಅಲ್ಲದೆ ಪ್ರತಿಯೊಂದು ತಂಡದೊಂದಿಗೆ ಇರುವ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವಾರು ಸಿಬ್ಬಂದಿ ಮತದಾನದಿಂದ ವಂಚಿತರಾಗಿದ್ದಾರೆ.
-ವಿನಯ್ ಕುಮಾರ್ (ಕೆಕೆಆರ್)
-ರಾಬಿನ್ ಉತ್ತಪ್ಪ (ಕೆಕೆಆರ್)
-ಮನೀಶ್ ಪಾಂಡೆ (ಕೆಕೆಆರ್)
- ಸ್ಟುವರ್ಟ್ ಬಿನ್ನಿ (ರಾಜಸ್ಥಾನ)
-ಕೆ.ಎಲ್ ರಾಹುಲ್ (ಸನ್ ರೈಸರ್ಸ್ ಹೈದರಾಬಾದ್)
- ಎಚ್.ಎಸ್ ಶರತ್ (ದೆಹಲಿ)
-ಕರುಣ್ ನಾಯರ್ (ರಾಜಸ್ಥಾನ)
-ರೋನಿತ್ ಮೋರೆ (ಚೆನ್ನೈ ಸೂಪರ್ ಕಿಂಗ್ಸ್)
-ಶ್ರೇಯಸ್ ಗೋಪಾಲ್ (ಮುಂಬೈ)
- ಸಿ.ಎಂ ಗೌತಮ್ (ಮುಂಬೈ)
-ಮಾಯಾಂಕ್ ಅಗರ್ವಾಲ್ (ಡೆಲ್ಲಿ ಡೇರ್ಡೆವಿಲ್ಸ್)
- ಅನಿಲ್ ಕುಂಬ್ಳೆ (ಮುಂಬೈ ಮೆಂಟೋರ್)
-ರಾಹುಲ್ ದ್ರಾವಿಡ್ (ರಾಜಸ್ಥಾನ ರಾಯಲ್ಸ್ ಮೆಂಟೋರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


