ದೇಶ

ಚುನಾವಣೆ 'ಫೇಸ್‌' ಬದಲಿಸಿದ ತಾಣಗಳು

ಚುನಾವಣೆ 'ಫೇಸ್‌' ಬದಲಿಸಿದ ತಾಣಗಳು
Published On :

ವಾಷಿಂಗ್ಟನ್: ಅಮೆರಿಕ ಮೂಲದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಗೂಗಲ್‌ಗಳು ಭಾರತದಲ್ಲಿ 2014ರ ಸಾರ್ವತ್ರಿಕ ಚುನಾವಣೆಯ ಸ್ವರೂಪವನ್ನೇ ಬದಲಿಸಿವೆ. 2009ರ ಚುನಾವಣೆಯಲ್ಲಿ ಶಶಿ ತರೂರ್ ಟ್ವಿಟ್ಟರ್ ಅಕೌಂಟ್ ಹೊಂದಿದ್ದ ಏಕೈಕ ರಾಜಕಾರಣಿಯಾಗಿದ್ದರು. 2014ರಲ್ಲಿ ಟ್ವಿಟ್ಟರ್, ಫೇಸ್‌ಬುಕ್ ಅಥವಾ ಇ-ಮೇಲ್ ಹೊಂದಿಲ್ಲದ ರಾಜಕಾರಣಿಯೇ ಇಲ್ಲ ಎನ್ನಬಹುದು. ಬ್ರೇಕಿಂಗ್ ನ್ಯೂಸ್‌ಗಳನ್ನು ಹರಡಿಸಲು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಮತದಾರರೊಂದಿಗೆ ಸಂವಹನ ನಡೆಸಲು ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ.
ಭಾರತದಲ್ಲಿ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದ್ದವೊ ಇಲ್ಲವೊ, ಆದರೆ ಸಾವಿರಾರು ಕಿ.ಮೀ ದೂರದಲ್ಲಿ ಕುಳಿತೇ ಈ ಮೂರು ಜಾಲತಾಣಗಳ ಮುಖ್ಯಸ್ಥರು ಬಹಳ ಹಿಂದೆಯೇ ಭಾರತದ ಲೋಕಸಭಾ ಚುನಾವಣೆ ಕುರಿತು ತಯಾರಿ ಆರಂಭಿಸಿದ್ದವು.
ಮೂರೂ ಜಾಲತಾಣಗಳು ಜಾಹೀರಾತು ರೂಪದಲ್ಲಿ ಭಾರಿ ಮೊತ್ತವನ್ನೇ ಗಳಿಸಿವೆ. ಆದರೆ ಯಾವ ಜಾಲತಾಣವೂ ಈ ಕುರಿತು ಗುಟ್ಟು ಬಿಟ್ಟುಕೊಡುತ್ತಿಲ್ಲ.
ಫಲಿತಾಂಶ ಪ್ರಕಟವಾಗುವ ದಿನ ಅಂದರೆ ಮೇ 16ರಂದು ಭಾರಿ ದಟ್ಟಣೆ ನಿರೀಕ್ಷಿಸಿರುವ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಗೂಗಲ್‌ಗಳು ಅದನ್ನು ನಿಭಾಯಿಸಲು ಸಜ್ಜಾಗುತ್ತಿವೆ.
49
ದಶಲಕ್ಷ ಚುನಾವಣೆ ಸಂಬಂಧಿ ಸಂವಹನ ಟ್ವಿಟ್ಟರ್‌ನಲ್ಲಿಯೇ ನಡೆದಿದೆ
20
ದಶಲಕ್ಷ ಚುನಾವಣೆ ಸಂಬಂಧಿ ಸಂವಹನ 2009ರ ಲೋಕಸಮರದ ಸಂದರ್ಭ ಟ್ವಿಟ್ಟರ್‌ನಲ್ಲಿ ನಡೆದಿತ್ತು
14
ದಶಲಕ್ಷ ಲೈಕ್‌ಗಳನ್ನು ಫೇಸ್‌ಬುಕ್‌ನಲ್ಲಿ ಮೋದಿ ಹೊಂದುವ ಮೂಲಕ ವಿಶ್ವದಲ್ಲಿ ಅತಿಹೆಚ್ಚು ಲೈಕ್‌ಗಳನ್ನು ಹೊಂದಿರುವ ರಾಜಕಾರಣಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸ್ಥಾನದಲ್ಲಿ ಮೋದಿ ಇದ್ದಾರೆ.
ಮೋದಿ
3.89
 ದಶಲಕ್ಷ ಫಾಲೋವರ್‌ಗಳನ್ನು ಹೊಂದುವ ಮೂಲಕ ಟ್ವಿಟ್ಟರ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.